Advertisement
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆ ಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ತನ್ನ ತಾಯಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ ಲಾಗಿದೆ. ತನ್ನ ಚಿತ್ರದುರ್ಗ ಜಿಲ್ಲೆ, ತನ್ನ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿ ಗಳು ಮತ್ತು ಸಂಘಟನೆಗಳು ಬಲವಂತವಾಗಿ ಬಡವ ರನ್ನು, ಮುಗ್ಧರನ್ನು ಮತಾಂತರಗೊಳಿಸುತ್ತಿವೆ. ಉಡುಪಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಇಂಥ ಘಟನೆ ನಡೆದಿವೆ ಎಂದು ಹೇಳಿ, ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Related Articles
Advertisement
ಎಲ್ಲೆಲ್ಲಿ ಮತಾಂತರ ನಿಷೇಧ ಕಾಯ್ದೆ? : ಒಡಿಶಾ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ಛತ್ತೀಸ್ ಗಢ, ಉತ್ತರ ಪ್ರದೇಶ.
ಎಸ್‌ಸಿ, ಎಸ್‌ಟಿ ಸೌಲಭ್ಯ ಯಾಕೆ? :
ಮತಾಂತರದ ಬಗ್ಗೆ ವಿವರ ನೀಡಿದ ಗೂಳಿಹಟ್ಟಿ ಶೇಖರ್, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಗಳನ್ನು ಗುರಿ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯ ದವರನ್ನೂ ಮತಾಂತರಗೊಳಿಸಲಾಗುತ್ತಿದೆ. ಇದರಿಂದ ಕೆಲವು ಕುಟುಂಬ ಗಳು ಸಮಸ್ಯೆ ಅನುಭವಿಸಿವೆ. ವಿರೋಧಿಸಿದರೆ ಅತ್ಯಾಚಾರದಂಥ ಸುಳ್ಳು ಪ್ರಕರಣ ದಾಖಲಿಸ ಲಾಗುತ್ತಿದೆ ಎಂದು ಆರೋಪಿಸಿದರು. ಸ್ವಂತ ಇಚ್ಛೆ ಇದ್ದರೆ ಮತಾಂತರಗೊಳ್ಳಲಿ, ಆದರೆ ಬಲವಂತದ ಮತಾಂತರ ಸಲ್ಲದು. ಹಾಗೆ ಮತಾಂತರಗೊಳ್ಳುವವರು ಎಸ್‌ಸಿ, ಎಸ್‌ಟಿ ಸೌಲಭ್ಯಗಳನ್ನು ಪಡೆಯುವುದನ್ನು ನಿಲ್ಲಿಸಲಿ ಎಂದು ಸವಾಲೆಸೆದರು.
ತನ್ನ ಸ್ವಂತ ಅನುಭವ ಹೇಳಿಕೊಂಡ ಗೂಳಿ ಹಟ್ಟಿ ಶೇಖರ್, ತಾಯಿ ಮತಾಂತರಗೊಂಡ ಬಳಿಕ ಹಳ್ಳಿಯ ಮನೆಯಲ್ಲಿ ನಾವು ಪೂಜೆ ಮಾಡುವಂತೆಯೂ ಇಲ್ಲ. ಮೌಡ್ಯ ಪ್ರತಿ ಬಂಧಕ ಕಾಯ್ದೆ ಜಾರಿ ಬಳಿಕ ಇದನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಮಿಷನರಿ ಗಳು ಮುಗ್ಧ ಜನರನ್ನು ಚರ್ಚ್ ಗೆ ಕರೆದೊಯ್ದು ಬ್ರೈನ್ ವಾಶ್ ಮಾಡುತ್ತಿವೆ. ಚಿತ್ರದುರ್ಗ ಜಿಲ್ಲೆ ಯಲ್ಲೇ 15ರಿಂದ 20 ಸಾವಿರ ಜನರನ್ನು ಮತಾಂತರಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಜೆ. ಜಾರ್ಜ್ ಮಧ್ಯಪ್ರವೇಶಿಸಿ, ಬಲವಂತದ ಮತಾಂತರಕ್ಕೆ ತಮ್ಮ ವಿರೋಧ ವಿದೆ. ಆದರೆ ಚರ್ಚ್ ಎನ್ನುವ ಮೂಲಕ ಅದನ್ನು ಸಾರ್ವತ್ರಿಕವಾಗಿ ದೂಷಣೆ ಮಾಡುವುದು ಸರಿಯಲ್ಲ ಎಂದರು. ಜೆಡಿಎಸ್ ಶಾಸಕ ದೇವಾನಂದ್ ಮಾತನಾಡಿ, ವಿಜಯಪುರ ಜಿಲ್ಲೆ ಯಲ್ಲಿಯೂ ಮತಾಂತರ ಹಾವಳಿ ಹೆಚ್ಚಾ ಗಿದೆ. ಬಂಜಾರ ಸಮುದಾಯವನ್ನು ಮತಾಂತರ ಗೊಳಿಸಲಾಗುತ್ತಿದೆ. ಅಲ್ಲಿ ಎರಡು ಬಣ ಗಳಾಗಿದ್ದು, ಸಮಾಜದ ಶಾಂತಿ ಮತ್ತು ಕುಟುಂಬದ ಸದಸ್ಯರ ನಡುವೆ ಸಮನ್ವಯ, ಸೌಹಾರ್ದ ಕದಡಿದೆ ಎಂದು ಸರಕಾರದ ಗಮನ ಸೆಳೆದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದನಿಗೂಡಿಸಿ, ತಾವು ಶಾಸಕರಾಗಿ ವಿಪಕ್ಷದಲ್ಲಿದ್ದಾಗ ಮತಾಂತರದ ಬಗ್ಗೆ ಸದನದಲ್ಲಿ ಚರ್ಚೆ ಯಾಗಿತ್ತು ಎಂದು ಜ್ಞಾಪಿಸಿದರು. ಈ ಬಗ್ಗೆ ಸರಕಾರ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಕಾಗೇರಿಯವರು ಸೂಚಿಸಿದರು.