ಮಂಗಳೂರು: ಮತಾಂತರ ನಿಷೇಧ ಕಾಯ್ದೆ ಬಿಜೆಪಿಯ ರಾಜಕೀಯ ಗಿಮಿಕ್ ಆಗಿದ್ದು, ಸರಕಾರದ ಆಡಳಿತ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ತಂತ್ರ ಎಂದು ಶಾಸಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಬಲವಂತದ ಮತಾಂತರವನ್ನು ಯಾವ ಧರ್ಮವೂ ಬೆಂಬಲಿಸುವು ದಿಲ್ಲ. ಅದರ ವಿರುದ್ಧ ಈಗಾಗಲೇ ದೇಶದಲ್ಲಿ ಕಾನೂನು ಜಾರಿಯಲ್ಲಿದೆ. ಅದರಲ್ಲಿ ಲೋಪ-ದೋಷಗಳಿದ್ದರೆ ಎಲ್ಲರ ಜತೆ ಚರ್ಚಿಸಿ ತಿದ್ದುಪಡಿ ಮಾಡಲು ಅವಕಾಶವಿದೆ. ಅದರ ಹೊರತಾಗಿ ಬೇರೆ ಕಾಯ್ದೆಯ ಅಗತ್ಯ ವಿದೆಯೇ ಎಂದು ಪ್ರಶ್ನಿಸಿದರು.
ಹಿಂದೂಯೇತರ ಧರ್ಮಗಳ ರಾಜರು, ಬ್ರಿಟಿಷರು ಸುದೀರ್ಘ ವಾಗಿ ದೇಶವಾಳಿದರೂ ಹಿಂದೂ ಧರ್ಮ ಪ್ರಬಲವಾಗಿಯೇ ಉಳಿ ದಿದೆ. ಆಗಲೂ ಅದನ್ನು ಬದಲಿಸಲು ಸಾಧ್ಯವಾಗಿಲ್ಲ, ಈಗ ಸಾಧ್ಯವೇ? ಆದ್ದರಿಂದ ಇಂಥ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಬದಲಿಗೆ ಜನರಿಗೆ ವಸತಿ, ಶಿಕ್ಷಣ, ಉದ್ಯೋಗ ನೀಡಲು ಸರಕಾರ ಮುಂದಾಗಲಿ ಎಂದು ಖಾದರ್ ಹೇಳಿದರು.
ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ಸಾಗುವಳಿ ಸಕ್ರಮ ಮಾಡಲು ಅವಕಾಶವಿಲ್ಲ: ಆರ್.ಅಶೋಕ್
ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥಬಿಪಿನ್ ರಾವತ್ ಹಾಗೂ ಅವರ ಸಂಗಡಿಗರ ಸಾವಿಗೆ ಇಡೀ ದೇಶವೇ ಶೋಕ ವ್ಯಕ್ತಪಡಿಸಿರುವಾಗ ಕೆಲವು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿರು
ವುದು ಖಂಡನೀಯ. ಅಂಥವರನ್ನು ಕೂಡಲೇ ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಅತ್ಯಂತ ಕಠಿನ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.