Advertisement

ಮತಾಂತರ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರಲಿ: ಹೊಸಬಾಳೆ

09:32 PM Oct 19, 2022 | Team Udayavani |

ಪ್ರಯಾಗ್‌ರಾಜ್‌: ಮತಾಂತರ ಮತ್ತು ಬಾಂಗ್ಲಾದೇಶದ ವಲಸಿಗರಿಂದಲೇ ದೇಶದಲ್ಲಿ ಜನಸಂಖ್ಯಾ ಅಸಮತೋಲನ ಉಂಟಾಗಿದೆ. ಮತಾಂತರ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ ಎಂದು ಆರ್‌ಎಸ್‌ಎಸ್‌ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದರು.

Advertisement

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ನಾಲ್ಕು ದಿನಗಳ ಆರ್‌ಎಸ್‌ಎಸ್‌ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಬುಧವಾರ ಮಾತನಾಡಿದ ಅವರು, “ಮತಾಂತರದ ಬಗ್ಗೆ ಆರ್‌ಎಸ್‌ಎಸ್‌ ಜಾಗೃತಿ ಮೂಡಿಸುತ್ತಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಅನೇಕರು ಘರ್‌ ವಾಪ್ಸಿ ಮೂಲಕ ಹಿಂದೂ ಧರ್ಮಕ್ಕೆ ಮರಳುವ ನಿಟ್ಟಿನಲ್ಲಿ ಸಂಘ ಶ್ರಮ ವಹಿಸುತ್ತಿದೆ,’ ಎಂದರು.

“ಜನಸಂಖ್ಯಾ ಅಸಮತೋಲನಕ್ಕೆ ವಲಸೆ ಮತ್ತು ಒಳನುಸುಳುವಿಕೆ ಎರಡನೇ ಪ್ರಮುಖ ಕಾರಣವಾಗಿದೆ. ಬಿಹಾರ ಮತ್ತು ಇತರೆ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಬಾಂಗ್ಲಾ ವಲಸಿಗರಿಂದ ಉಂಟಾದ ಜನಸಂಖ್ಯಾ ಅಸಮತೋಲವನ್ನು ಕಾಣಬಹುದಾಗಿದೆ,’ ಎಂದು ಹೊಸಬಾಳೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next