Advertisement
ಕಾರ್ ಮತ್ತು ಟ್ರಾಫಿಕ್ ಸಿಗ್ನಲ್ಗಳುಪರಸ್ಪರ ಮಾತನಾಡುವದೆಂದರೆ ಅದೇಗೆ ಎನ್ನುವ ಪ್ರಶ್ನೆ ಸಹಜವಾಗಿ ನಿಮ್ಮ ಮನದ ಗೋಡೆಯಲ್ಲಿ ಮೂಡಿರ ಬಹುದು. ತಂತ್ರಜ್ಞಾನದ ಈ ಹೊಸ ಅಲೆಯು ನಗರಗಳನ್ನು ಚುರುಕುಗೊಳಿಸುವಂತೆ ಮಾಡಿದೆ. ಉದಾಹರಣೆಗೆ ಒಂದು ಸಿಗ್ನಲ್ ಕಂಬ ಯಾವ ಸಿಗ್ನಲ್ ( ಸೂಚನೆ)ಅನ್ನು ಕೊಟ್ಟಿದೆ ಎಂದು ಚಾಲಕನಿಗೆ ಗೊತ್ತಾಗುತ್ತದೆ. ಇದು ಹೇಗೆ ಅಂದರೆ ಮುಂದುವರಿದ ತಂತ್ರಜ್ಞಾನ ಹೊಂದಿರುವ ದೊಡ್ಡ ದೊಡ್ಡ ಕಾರುಗಳು ಮತ್ತು ಸಿಗ್ನಲ್ ಕಂಬದ ಜತೆಗೆ ಸೆನ್ಸಾರ್ ತಂತ್ರಜ್ಞಾನ ನೀಡಲಾಗಿದೆ. ಬಿಎಮ್‌ಡಬ್ಲೂ ಕಾರ್ ಈ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾಡಿಕೊಂಡಿದೆ. ಬಿಎಮ್ ಡಬ್ಲೂ 5 – 4 – 3 – 2 – 1 ಸೆಕೆಂಡ್ ತಿಳಿಸುವ ಮೂಲಕ ನಿಖರ ಗುರಿ ತಲುಪಲು ಸಹಾಯ ಮಾಡುತ್ತದೆ. ಆದರೆ ಮರ್ಸಿಡಿಸ್ “ನೀವು ಗಂಟೆಗೆ 32 ರಿಂದ 52 ಕಿಲೋಮೀಟರ್ ನಡುವೆ ಓಡಿಸಿದರೆ, ನೀವು ಹಸಿರು ದೀಪ ಪಡೆಯುತ್ತೀರಿ’ ಎನ್ನುವ ಸೂಚನೆಗಳು ಚಾಲಕರಿಗೆ ರವಾನೆ ಮಾಡುತ್ತವೆ. ಅಗತ್ಯವಿದ್ದಾಗ ಕಾರ್‌ನೊಳಗಿನ ಸಿಸ್ಟಮ್ ಚಾಲಕನಿಗೆ ದೃಶ್ಯ ಮತ್ತು ಶ್ರವ್ಯ ಎಚ್ಚರಿಕೆಗಳನ್ನು ಒದಗಿಸುತ್ತದೆ.
ಸ್ಮಾರ್ಟ್ ನಗರದೆಡೆಗೆ ಹೆಜ್ಜೆ ಹಾಕುತ್ತಿರುವ ಮಂಗಳೂರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸುವತ್ತ ಇನ್ನಷ್ಟು ಗಮನಹರಿಸಬೇಕು. ಹೀಗಾಗಿ ಬೇರೆ ದೇಶಗಳಲ್ಲಿ ಅಳವಡಿಸುವ ಹೊಸ ತಂತ್ರಜ್ಞಾನಗಳನ್ನು ಬಹು ಬೇಗನೆ ಅಳವಡಿಸಿಕೊಳ್ಳು ವ ಪ್ರಯತ್ನ ಪಟ್ಟರೆ ಉಳಿದ ಜಿಲ್ಲೆಗಳಿಗೆ ಮಾದರಿಯಾಗಬಹುದು. ಮಂಗಳೂರೇನು ಟ್ರಾಫಿಕ್ ಸಮಸ್ಯೆಯಿಂದ ಹೊರತಾಗಿಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಭವಿಷ್ಯದಲ್ಲಿ ಇಂತಹ ಯೋಜನೆಗಳನ್ನು ಪರಿಚಯಿಸಿದರೆ ನಗರದ ಜನತೆಯ ಒತ್ತಡ ಕಡಿಮೆ ಮಾಡುವಲ್ಲಿ ಪ್ರಯತ್ನಪಡಬಹುದು. - ವಿಶ್ವಾಸ್ ಅಡ್ಯಾರ್