Advertisement

ನಾಗರಿಕ ಸೇವಾ ಪರೀಕ್ಷೆ  ಟಾಪರ್‌ ರಂಜನ್‌ ಶೆಣೈ ಸಂವಾದ

02:20 AM Jul 18, 2017 | Team Udayavani |

ಪಡುಬಿದ್ರಿ: ವಿದ್ಯಾರ್ಥಿಗಳು ಮುಂದೆ ವಿಜ್ಞಾನಿಗಳೋ, ವೈದ್ಯರೋ, ಆರ್ಕಿಟೆಕ್ಚರೋ, ಸೈನಿಕರೋ, ಸರಕಾರಿ ನೌಕರನೋ ಆಗಲು ಬಯಸುತ್ತೀರಾದಲ್ಲಿ ನಿಮ್ಮ ಆಯ್ಕೆಯ ಕ್ಷೇತ್ರದ ಬಗ್ಗೆ ವಿಶೇಷ ಗಮನ ಹರಿಸಿ ಸಾಧಕರಾಗಿರಿ. ಶಿಕ್ಷಣದಿಂದ ಜ್ಞಾನ ಮತ್ತು ಕೌಶಲ ವೃದ್ಧಿಯಾಗುತ್ತದೆ. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ತೀವ್ರ ತರಹದ ಪೈಪೋಟಿಯಿದೆ. ಹಾಗಾಗಿ ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಪುಸ್ತಕಗಳನ್ನು ಓದಿ ಪ್ರೌಢಿಮೆಯನ್ನು ಸಾಧಿಸಿರಿ ಎಂದು ಐ. ಎ.ಎಸ್‌.ನಲ್ಲಿ 112ನೇ ರ್‍ಯಾಂಕ್‌ ಪಡೆದ ಉಡುಪಿ ಲಕ್ಷ್ಮೀದ್ರ ನಗರದ ರಂಜನ್‌ ಆರ್‌. ಶೆಣೈ ಕರೆ ನೀಡಿದರು. ಅವರು ಮಂಗಳವಾರ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಮಾತನಾಡಿದರು.

Advertisement

ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚಿನವರು ಎಂಜಿನಿಯರ್‌, ಡಾಕ್ಟರ್‌ ಆಗ ಬಯಸುತ್ತಾರೆ. ನಾಗರೀಕ ಸೇವಾ ಪರೀಕ್ಷೆ (ಐ.ಎ.ಎಸ್‌) ಬಗ್ಗೆ ಯೋಚಿಸುವವರ ಪ್ರಮಾಣ ಕಡಿಮೆಯಾಗಿದೆ. ಯಾವುದೇ ಪದವಿಯನ್ನು ಗಳಿಸಿದರೂ ಐ. ಎ. ಎಸ್‌. ಪರೀಕ್ಷೆ ಬರೆಯಲು ಅರ್ಹರಾಗಿದ್ದು  ಪ್ರಯತ್ನ ಮಾಡಿ ಎಲ್ಲಾ ವಿಷಯಗಳ ಸಮಗ್ರ ಅಧ್ಯಯನ ನಡೆಸಿದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದು ಶೆಣೈ ಹೇಳಿದರು. ಐ.ಎ.ಎಸ್‌. ಆಫೀಸರ್‌ ಆದಲ್ಲಿ ದೇಶಕ್ಕೆ ಒಳಿತನ್ನು ಮಾಡಬಹುದು. ಸಮಾಜದ ಜನರ ಒಳಿತನ್ನು ಬಯಸಿ ದೇಶಕ್ಕಾಗಿ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುವ ಅವಕಾಶ ಲಭ್ಯವಾಗುತ್ತದೆ. ಮುಂದುವರಿದ ರಾಷ್ಟ್ರಗಳ ಪಥದಲ್ಲಿ ನಮ್ಮ ದೇಶವನ್ನೂ ಮುನ್ನಡೆಸಲು ಅವಕಾಶ ಇರುತ್ತದೆ. ರಾಷ್ಟ್ರೀಯ ಕಾಳಜಿ ಹೊಂದಿ ದೇಶವನ್ನು ಪ್ರತಿನಿಧಿಸುವ ವ್ಯಕ್ತಿ ನಾವಾಗಬಲ್ಲೆವು ಎಂದು ರಂಜನ್‌ ಶೆಣೈ ಹೇಳಿದರು.

ಕಾಲೇಜು ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಬಿ.ಆರ್‌. ನಾಗರತ್ನಾ ರಾವ್‌, ಮುಖ್ಯೋಪಾಧ್ಯಾಯರಾದ ಶ್ರೀಕಾಂತ್‌ ರಾವ್‌, ಲಕ್ಷ್ಮೀ ಉಡುಪ ಭಾಗವಹಿಸಿದ್ದರು. ಉಪಾನ್ಯಾಸಕಿ ಸುಧಾ ಭಟ್‌ ಸ್ವಾಗತಿಸಿದರು. ಮಧುಸೂದನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next