Advertisement

ಪಾಲಿಕೆ ಸದಸ್ಯರೊಂದಿಗೆ ಸಂವಾದ

10:30 AM Apr 03, 2020 | Suhan S |

ಬೆಂಗಳೂರು: ಕೋವಿಡ್ 19 ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಯುಧ್ದೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಸೂಚಿಸಿದ್ದಾರೆ.

Advertisement

ಈ ಸಂಬಂಧ ಪಾಲಿಕೆ ಸದಸ್ಯರೊಂದಿಗೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿದರು. ಸಂವಾದದ ವೇಳೆ ಹಲವಾರು ಪಾಲಿಕೆ ಸದಸ್ಯರು, ಕೊಳಗೇರಿ ಪ್ರದೇಶಗಳಲ್ಲಿ ಸರಿಯಾಗಿ ಆಹಾರ ಪೊಟ್ಟಣಗಳು ಪೂರೈಕೆಯಾಗುತ್ತಿಲ್ಲ, ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲು ಅನುವು ಮಾಡಿಕೊಡಬೇಕು. ಇಂದಿರಾ ಕ್ಯಾಂಟೀನಿನಲ್ಲಿ ವಿತರಿಸುತ್ತಿರುವ ಆಹಾರ ಪೂರೈಕೆ ಸಂಖ್ಯೆ ಹೆಚ್ಚಿಸಬೇಕು, ಜನರ ನಿತ್ಯ ಪೂರೈಕೆ ವಸ್ತುಗಳಿಗೆ ಈಗಾಗಲೇ ಬಸವನಗುಡಿ ಮತ್ತಿತರೆ ಸ್ಥಳದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಮಾರುಕಟ್ಟೆಯಂತೆ, ಮಲ್ಲೇಶ್ವರಂನ ಆಟದ ಮೈದಾನದ ಸ್ಥಳವನ್ನು ಉಪಯೋಗಿಸಿಕೊಂಡು ತಾತ್ಕಾಲಿಕ ವಾಗಿ ಮಾರುಕಟ್ಟೆ ಸ್ಥಾಪಿಸಬೇಕು. ಸೋಂಕು ನಿವಾರಕ ಸಿಂಪಡಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮೇಯರ್‌ ಗೌತಮ್‌ ಕುಮಾರ್‌, ಉಪ ಮೇಯರ್‌ ರಾಮ್‌ ಮೋಹನ್‌ ರಾಜ್‌,ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾ=  ನಾರಾಯಣ್‌, ಎಲ್‌. ಶ್ರೀನಿವಾಸ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next