ಜಮಖಂಡಿ: ರಾಜ್ಯ ನೇಕಾರ ಸೇವಾ ಸಂಘದ ಮೂಲಕ ನೇಕಾರರಿಂದ, ನೇಕಾರರಿಗಾಗಿ, ನೇಕಾರರಿಗೋಸ್ಕರ ಬಾದಾಮಿಯಲ್ಲಿ ಜೂನ್ 5ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಮಟ್ಟದ ನೇಕಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಟಿರಕಿ ಹೇಳಿದರು.
ಹುನ್ನೂರಲ್ಲಿ ನೇಕಾರ ಜಾಗೃತಿ ಮತ್ತು ಬೃಹತ್ ಸಮಾವೇಶದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಮತ್ತು ನೇಕಾರರು ದೇಶದ ಎರಡು ಕಣ್ಣುಗಳಿದ್ದು, ಸಮಾವೇಶ ಸ್ವಾರ್ಥಕ್ಕಾಗಿ ಅಲ್ಲ, ದೇಶದ ನೇಕಾರರ ಪರಿವರ್ತನೆಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ವೃತ್ತಿಪರ ನೇಕಾರರು ಅನೇಕ ಸಮಸ್ಯೆಗಳಿಂದ ಸಂಕಷ್ಟಕ್ಕೀಡಾಗಿದ್ದು, ನೇಕಾರಿಕೆ ಮತ್ತು ನೇಕಾರರ ಚಳಿವು ಉಳಿವಿನ ಪ್ರಶ್ನೆಯಾಗಿದೆ. ರೇಷ್ಮೆ, ಕಾಟನ್ ಬೆಲೆ ಗಗನಕ್ಕೇರಿದ್ದು, ತಯಾರಿ ಬಟ್ಟೆ ಮಾತ್ರ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಸಮರ್ಪಕ ಸೌಲಭ್ಯಗಳಿಲ್ಲದೇ ಇರುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯದೆ ಉದ್ಯೋಗ ಬೀದಿಪಾಲಾಗಿದೆ. ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಹಿನ್ನಡೆಯಾಗಿದೆ. ದೇಶದಲ್ಲಿರುವ ರಾಜಕೀಯ ನಾಯಕರು ನೇಕಾರರನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಆರ್ಥಿಕ ಸಂಕಷ್ಟದಿಂದಾಗಿ ಕರ್ನಾಟಕದಲ್ಲಿ 13 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ನೇಕಾರಿಕೆ ಮತ್ತು ನೇಕಾರರು ಉಳಿಯುವುದು ಕಠಿಣ ಆಗಲಿದೆ ಎಂದರು.
ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ನೇಕಾರರ ಸಮಾವೇಶದ ಮೂಲಕ ಅನೇಕ ವಿಷಯಗಳ ಕುರಿತು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗಿದೆ. ದಕ್ಷಿಣಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ತಮಿಳುನಾಡು, ಕಲಟಣ, ಕೇರಳ ಸಹಿತ ಎಲ್ಲ ರಾಜ್ಯದ ನೇಕಾರರನ್ನು ಸೇರಿಸಿಕೊಂಡು ಜೂನ್ 5ರಂದು ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಸಮುದಾಯದ ಎಲ್ಲ ಜಗದ್ಗುರುಗಳು, ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ರಮೇಶ ಭಕರೆ, ಕೇಂದ್ರದ ಸಚಿವ ಪಿಯೂಶ್ ಗೋಯಲ್, ಅಜಾನರಾದ ಮೇಘವಾಳ, ಅನುಪ್ರಿಯ ಚಟೀಲ, ಉದಸಾಹೇಬ ದಾನದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್.ಡಿ. ಕುಮಾರ ಸ್ವಾಮಿ ಆಗಮಿಸಲಿದ್ದಾರೆ ಎಂದರು.