Advertisement
ಗ್ರಾಮದಲ್ಲಿ ಮುಜರಾಯಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಬಸವೇಶ್ವರ ದೇವಸ್ಥಾನಸರ್ಕಾರದಅನುದಾನ ಪಡೆಯದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ದೇವಾಲಯ ನಿರ್ಮಾಣಗೊಂಡಿದೆ. ಕೆ.ಆರ್.ಪೇಟೆ ಉಪ ಚುನಾವಣೆಗೆ ಸಂದರ್ಭದಲ್ಲಿ ನೀತಿ ಸಂಹಿತೆ ಇದ್ದು ಶ್ರೀ ಚುಂಚನಗಿರಿ ಸ್ವಾಮೀಜಿಯಿಂದ ಉದ್ಘಾಟನೆ ಮಾಡಿಸಲಾಗಿತ್ತು. ಆದರೆ, ದೇವಾಲಯ ಉದ್ಘಾಟನೆಗೊಂಡು ಹಲವು ದಿನಗಳ ನಂತರ ಶಿಷ್ಟಾಚಾರದ ಪ್ರಕಾರ ನಾಮಫಲಕ ಹಾಕಬೇಕು ಎಂದು ತಹಶೀಲ್ದಾರ್ ಚಂದ್ರಮೌಳಿ ತಿಳಿಸಿದ್ದು, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಸ್ವಾಮೀಜಿ ಹೆಸರು ಬಿಟ್ಟು ಇನ್ನಾವುದೇ ಜನಪ್ರತಿನಿಧಿಗಳ ಹೆಸರಿರುವ ನಾಮಫಲಕ ಹಾಕಬಾರದು ಎಂದು ಬಿಗಿ ಪಟ್ಟುಹಿಡಿದರು.
Related Articles
Advertisement
ಗ್ರಾಮದಲ್ಲಿ ಒಂದೇ ಬಾರಿ ಮೂರು ದೇವಾಲಯ ನಿರ್ಮಿಸಿ ಉದ್ಘಾಟಿಸಿದ್ದು, ಉಳಿದ ಎರಡು ದೇವಾಲಯಕ್ಕೆ ನಾಮಫಲಕ ಹಾಕಿಸದೆ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಮಾತ್ರ ಏಕೆ ಹಾಕಿಸಬೇಕು. ನಿಯಮ ಇದೆಯಾ. ಹಾಗಿದ್ದರೆ ಮೂರು ದೇವಾಲಯಕ್ಕೂ ಹಾಕಿಸಿ ಇಲ್ಲದಿದ್ದರೆ ಯಾವುದೇ ದೇವಸ್ಥಾನಕ್ಕೂ ಹಾಕಸಬೇಡಿ ಎಂದು ಮನವಿ ಮಾಡಿದರೂ ತಹಶೀಲ್ದಾರ್ ನಾನು ಕಾನೂನು ಪಾಲನೇ ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಹಾಕಿಸು ವುದಾಗಿ ಹೇಳಿ ಅಂತಿಮವಾಗಿ ಅಳವಡಿಸಿ ತೆರಳಿದರು.
ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಮಾತನಾಡಿ, ಗ್ರಾಮದಲ್ಲಿ ಶಾಂತಿಯುತವಾಗಿ ದೇವಸ್ಥಾನ ನಿರ್ಮಿಸಿದ್ದು, ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಾಮಫಲಕ ಅಳವಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಪಿಎಸ್‌ಐ ಮಂಜು ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.