Advertisement

ಒಳಉಡುಪು ಆದೇಶ ವಿವಾದ

02:26 PM Jul 06, 2018 | |

ಪುಣೆ: ಇಲ್ಲಿನ ಶಾಲೆಯೊಂದು ಹೆಣ್ಣು ಮಕ್ಕಳ ವಸ್ತ್ರ, ಒಳ ಉಡುಪುಗಳ ಕುರಿತು ಕರಾರುಗಳನ್ನು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ವಿರುದ್ಧ ವಿದ್ಯಾರ್ಥಿನಿಯರು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದು, ಕೊನೆಗೆ ಆದೇಶ ವಾಪಸ್‌ ಪಡೆಯಲಾಗಿದೆ.

Advertisement

ವಿದ್ಯಾರ್ಥಿನಿಯರ ಸಮವಸ್ತ್ರದ ಅಳತೆ ಇಷ್ಟೇ ಇರಬೇಕು, ಅವರು ಬಿಳಿ ಅಥವಾ ಚರ್ಮದ ಬಣ್ಣದ ಒಳವಸ್ತ್ರವನ್ನೇ ಧರಿಸಿ ಬರಬೇಕು ಎಂದು ಮಯೀರ್ ಎಂಐಟಿ ಶಾಲೆಯ ದಿನಚರಿ ಪುಸ್ತಕದಲ್ಲಿ ಬರೆದು ಕಳುಹಿಸಿಲಾಗಿತ್ತು. ಅಲ್ಲದೇ ಶಾಲಾ ಶೌಚಾಲಯವನ್ನು ನಿಗದಿತ ಸಮಯವಲ್ಲದೇ ಬೇರೆ ಸಮಯದಲ್ಲಿ ಬಳಸುವಂತಿಲ್ಲ ಎಂದೂ ನಿರ್ಬಂಧ ವಿಧಿಸಿತ್ತು. ಈ ನಿಯಮಗಳನ್ನು ಮೀರಿದರೆ ಶಿಕ್ಷೆ ವಿಧಿಸುವುದಾಗಿಯೂ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next