ಕಾಶಿ: ಜ್ಞಾನವಾಪಿ ಮಸೀದಿ ವಿವಾದ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವಂತೆಯೇ; ಇನ್ನೊಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಔರಂಗಜೇಬನಿಂದ ಒಡೆಯಲ್ಪಟ್ಟು, ಈಗ ಮಸೀದಿಯಾಗಿರುವ ಕಾಶಿಯ ಬಿಂದು ಮಾಧವ ದೇಗುಲದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡ ಬೇಕೆಂದು, ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಸಲಾಗಿದೆ.
ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆ ವಶ ದಲ್ಲಿರುವ “ಬೇನಿ ಮಾಧವ ಕಾ ಧಾರಹರ’ ಕಟ್ಟಡದ ಜಾಗದಲ್ಲಿ ಬಿಂದು ಮಾಧವ ದೇಗುಲವಿತ್ತು. ಗಂಗಾ ನದಿಯ ದಡದಲ್ಲಿರುವ ಪಂಚಗಂಗಾ ಘಾಟ್‌ನಲ್ಲಿರುವ ಈ ದೇಗುಲವನ್ನು ಔರಂಗಜೇಬ್ ಒಡೆದುಹಾಕಿ “ಅಲಾಮ್ಗಿರ್ ಮಸೀದಿ’ ನಿರ್ಮಿಸಿದ್ದ.
ಹಾಗಾಗಿ, ಈ ಮಸೀದಿ ಇರುವ ಕಡೆ ಬಿಂದು ಮಾಧವನನ್ನು ಆರಾಧಿ ಸಲು ಅವಕಾಶ ಕೊಡಬೇಕೆಂದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತಮ್ಮ ವಾದಕ್ಕೆ ಪೂರಕವಾಗಿ, ಐತಿಹಾಸಿಕ ಗ್ರಂಥಗಳು, ವಾರಾಣಸಿ ಗೆಜೆಟಿಯರ್‌ಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಅರ್ಜಿದಾರರ ಪರ ವಕೀಲರ ವಾದ ವನ್ನು ಆಲಿಸಿದ ನ್ಯಾಯಾಧೀಶ ಆಕಾಶ್ ವರ್ಮಹಾಸ್, ಜು. 4ರಂದು ಅರ್ಜಿಯ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿದ್ದಾರೆ.ಅದೇ ದಿನ, ವಾರಾಣಸಿ ನ್ಯಾಯಾಲಯ ದಲ್ಲಿ ಜ್ಞಾನವಾಪಿ ಮಸೀದಿ- ಶೃಂಗಾರ ಗೌರಿ ಅರ್ಜಿಯ ವಿಚಾರಣೆಯೂ ನಡೆಯಲಿದೆ.