Advertisement

Sherpa:ವಿವಾದಕ್ಕೆ ತುತ್ತಾದ ಸಾಹಸಿ ಕ್ರಿಸ್ಟಿನ್‌-ಅಸುನೀಗುತ್ತಿದ್ದ ಶೆರ್ಪಾ ದಾಟಿ ನಡೆದ ಆರೋಪ

08:37 PM Aug 12, 2023 | Team Udayavani |

ಕಠ್ಮಂಡು: ಜಗತ್ತಿನ ಅತಿ ಎತ್ತರ 14 ಪರ್ವತಗಳನ್ನು ಅತ್ಯಂತ ವೇಗವಾಗಿ ಏರಿದ ವ್ಯಕ್ತಿ ಎಂಬ ಹಿರಿಮೆಗೆ ನಾರ್ವೆಯ ಸಾಹಸಿ ಕ್ರಿಸ್ಟಿನ್‌ ಹರಿಲಾ(37) ಪಾತ್ರರಾಗಿದ್ದಾರೆ. ಇದೇ ವೇಳೆ ಅವರು ವಿವಾದಕ್ಕೂ ಕೂಡ ತುತ್ತಾಗಿದ್ದಾರೆ.

Advertisement

ದಾಖಲೆ ಮುರಿವ ನಿಟ್ಟಿನಲ್ಲಿ ಕ್ರಿಸ್ಟಿನ್‌ ಪ್ರಾಣ ಕಳೆದುಕೊಳ್ಳುತ್ತಿದ್ದ ಶೆರ್ಪಾ ಮೇಲೆಯೇ ನಡೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರಿಸ್ಟಿನ್‌, “ನೇಪಾಳಿ ಗೈಡ್‌ ತೆನ್ಜಿನ್‌ ಲಾಮಾ ಶೆರ್ಪಾ ಅವರನ್ನು ಬದುಕಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆವು. ನಾನು ನಮ್ಮ ಕ್ಯಾಮೆರಾಮನ್‌ ಮೊಹಮ್ಮದ್‌ ಹಸನ್‌ ಮತ್ತು ಇತರೆ ಇಬ್ಬರು ಒಂದೂವರೆ ಗಂಟೆ ಅವರನ್ನು ಕಾಪಾಡಲು ಪ್ರಯತ್ನಿಸಿದೆವು. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ,” ಎಂದು ಬರೆದುಕೊಂಡಿದ್ದಾರೆ.

ದ್ರೋಣ್‌ ಮೂಲಕ ಸೆರೆಯಾದ ಚಿತ್ರದಲ್ಲಿ ಅವರು ಶೆರ್ಪಾ ದಾಟಿ ನಡೆದು ಹೋಗುತ್ತಿರುವ ಚಿತ್ರವನ್ನು ಶೇರ್‌ ಮಾಡಿರುವ ಕೆಲವರು, ಇದೊಂದು ಅಮಾನವೀಯ ನಡೆ ಎಂದು ಖಂಡಿಸಿದ್ದಾರೆ.

3 ತಿಂಗಳು 1 ದಿನ:
ವಿಶ್ವದಲ್ಲಿರುವ 8,000 ಮೀಟರ್‌ಗೂ ಎತ್ತರದ 14 ಪರ್ವತಗಳನ್ನು ಕ್ರಿಸ್ಟಿನ್‌ ಅವರ ತಂಡ ಅತ್ಯಂತ ವೇಗವಾಗಿ ಏರಿದೆ. . ಈ ಹಿಂದೆ 2019ರಲ್ಲಿ ನೇಪಾಳ ಮೂಲದ ಬ್ರಿಟಿಶ್‌ ಸಾಹಸೊ ನಿರ್ಮಲ್‌ ಪುರ್ಜಾ, ಈ ಸಾಧನೆ ಮಾಡಲು ಆರು ತಿಂಗಳು ಮತ್ತು ಆರು ದಿನಗಳನ್ನು ತೆಗೆದುಕೊಂಡಿದ್ದರು. ಅಂತಿಮವಾಗಿ ಅವರು ಜಗತ್ತಿನಲ್ಲಿ 2ನೇ ಅತ್ಯಂತ ಎತ್ತರದ ಪರ್ವತ ಕೆ2 ಪರ್ವತವನ್ನು ಏರಿದ್ದರು. ಇದಕ್ಕಾಗಿ ತಂಡ ಒಟ್ಟು 3 ತಿಂಗಳು ಮತ್ತು ಒಂದು ದಿನವನ್ನು ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next