Advertisement

ಬಿಡಾಡಿ ದನಗಳ ಹಾವಳಿಗೆ ಬ್ರೇಕ್‌ಹಾಕಿ

05:03 PM Oct 21, 2019 | Team Udayavani |

ಚನ್ನಪಟ್ಟಣ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಪ್ರಮುಖ ರಸ್ತೆಗಳಲ್ಲಿ ದನಗಳ ಕಾಟ ಅತಿಯಾಗಿದ್ದು, ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆಯಾಗಿದೆ. ಗುಂಪು ಗುಂಪಾಗಿ ರಸ್ತೆ ಮಧ್ಯೆಯೇ ದನಗಳು ನಿಲ್ಲುವುದರಿಂದ ವಾಹನ ಸವಾರರು ಭಯದ ನಡುವೆಯೇ ವಾಹನ ಚಲಾಯಿಸಬೇಕಿದೆ.

Advertisement

ಪಾದ ಚಾರಿಗಳು ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತವೋ ಎಂಬ ಆತಂಕದಲ್ಲಿ ಸಾಗುವಂತಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿನ ಕೆಲವರು

ಹಗಲು ವೇಳೆಯಲ್ಲಿ ದನಗಳನ್ನು ಹೊರಗೆ ಬಿಟ್ಟುಬಿಡುವುದರಿಂದ ಅವು ಎಲ್ಲೆಂದರಲ್ಲಿ ಆಹಾರ ಹರಸುತ್ತಾ ಓಡಾಡುವುದು ಸಾಮಾನ್ಯವಾಗಿದೆ. ಆಹಾರ ಸಿಗದಿದ್ದಾಗ ರಸ್ತೆಬದಿಯಲ್ಲಿನ ತ್ಯಾಜ್ಯದ ಕಡೆಗೆ ತೆರಳುವ ದನಗಳು, ಅಲ್ಲಿಯೇ ತಿಂದು, ಮಲಗುವ ಪ್ರವೃತ್ತಿ ಬೆಳೆಸಿಕೊಂಡಿವೆ. ನಗರಸಭೆ ಅಧಿಕಾರಿ ಗಳು ಬೀಡಾಡಿ ದನಗಳ ಉಪಟಳ ವನ್ನು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾ ರೆಂದು ಸಾರ್ವಜನಿಕರು ಆರೋಪಿಸಿ ದ್ದಾರೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ರಾಸುಗಳ ಮಾಲೀಕರಿಗೆ ತಿಳಿವಳಿಕೆ ನೀಡಿ, ರಸ್ತೆಗಳಿಗೆ ಅವುಗಳನ್ನು ಬಿಡ ದಂತೆ ಸೂಚಿಸಬೇಕು ಎಂದು ಸಾರ್ವ ಜನಿಕರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next