Advertisement

“ಕ್ವಾರಂಟೈನ್‌ ಕೇಂದ್ರಗಳ ನಿರ್ವಹಣೆಗೆ ಕಂಟ್ರೋಲ್‌ ರೂಂ’

10:47 PM May 17, 2020 | Team Udayavani |

ಕುಂದಾಪುರ: ಕ್ವಾರಂಟೈನ್‌ ಕೇಂದ್ರಗಳ ಸಮರ್ಥ ನಿರ್ವಹಣೆಗೆ ತಾಲೂಕಿನಲ್ಲಿ ಕಂಟ್ರೋಲ್‌ ರೂಂ ತೆರೆಯಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

Advertisement

ಅವರು ರವಿವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಅಧಿಕಾರಿಗಳ, ವಿವಿಧಪಕ್ಷಗಳ ಮುಖಂಡರ ಸಭೆ ನಡೆಸಿ ಮಾತನಾಡಿದರು.

ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದ ಹಾಸ್ಟೆಲ್‌ಗ‌ಳನ್ನು ಕ್ವಾರಂಟೈನ್‌ ಕೇಂದ್ರಗಳಾಗಿ ಮೀಸಲಿಡುವುದು ಬೇಡ, ಅಂತೆಯೇ ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಸರಿಯಾಗಿಲ್ಲದ ಪ್ರಾಥಮಿಕ ಶಾಲೆಗಳನ್ನು ಕೂಡಾ ಮೀಸಲಿಡುವುದು ಬೇಡ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಶಾಸಕರು, ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಂಟಾಗುವ ಸಮಸ್ಯೆ, ಆಹಾರ ಇತ್ಯಾದಿಗಳ ವಿವರಗಳನ್ನು ಒದಗಿಸುವ ಸಲುವಾಗಿ ಕಂಟ್ರೋಲ್‌ ರೂಂ ತೆರೆಯಿರಿ ಎಂದರು.

ಜಿಲ್ಲೆಯ ಗಡಿಯ ಒಳಗೆ ಎಷ್ಟು ಮಂದಿ ಆಗಮಿಸುತ್ತಾರೆ, ಎಷ್ಟು ಹೊತ್ತಿಗೆ ಆಗಮಿಸುತ್ತಾರೆ ಇತ್ಯಾದಿ ಮಾಹಿತಿ ಖಚಿತವಾಗಿ ದೊರೆಯುವುದಿಲ್ಲ. ಆದ್ದರಿಂದ ವ್ಯವಸ್ಥೆ ಮಾಡುವಾಗ ವಿಳಂಬ ಆಗುತ್ತಿದೆ. ಇದಕ್ಕಾಗಿ ಕ್ವಾರಂಟೈನ್‌ ಕೇಂದ್ರ ತಲುಪಿದ ಕೂಡಲೇ ಆಗಮಿಸಿದವರಿಗೆ ಉಪಾಹಾರ, ಊಟ ದೊರೆಯುವಂತೆ ಮಾಡಬೇಕು. ಅಲ್ಲದೇ ಆಗಮಿಸುವವರು ಕೂಡಾ ವ್ಯವಸ್ಥೆಯನ್ನು ದೂರುವ ಬದಲು ತುರ್ತು ಹಸಿವು ನೀಗಿಸಲು ಏನಾದರೂ ಆಹಾರ ಪದಾರ್ಥ ಇಟ್ಟುಕೊಂಡಿದ್ದರೆ ಸಮಸ್ಯೆಯಾಗುವುದಿಲ್ಲ. ಈಗಿನ್ನೂ ಹೊರರಾಜ್ಯಗಳಲ್ಲಿ ನೆಲೆಸಿದ ಈ ಊರಿನ ಶೇ.2ರಷ್ಟು ಜನ ಕೂಡಾ ಆಗಮಿಸಿಲ್ಲ. ಇನ್ನೂ ಎರಡು ಮೂರು ತಿಂಗಳ ಕಾಲ ಕ್ವಾರಂಟೈನ್‌ ಕೇಂದ್ರಗಳು ತೆರೆದಿದ್ದು ಬೇರೆ ರಾಜ್ಯಗಳಿಂದ ಜನ ಬರುತ್ತಲೇ ಇರುವ ಸಾಧ್ಯತೆಯಿದೆ. ಪಕ್ಷಭೇದ ಮರೆತು ಎಲ್ಲರೂ ಇವುಗಳ ನಿರ್ವಹಣೆಗೆ ನೆರವಾಗಲಿದ್ದಾರೆ ಎಂದರು.

ಅಧಿಕಾರಿಗಳನ್ನು ಬೈಯಬೇಡಿ. ಅವರ ಕಷ್ಟಗಳನ್ನೂ ಅರಿಯಿರಿ. ಓಟು ಹಾಕಿಸಿಕೊಂಡದ್ದಕ್ಕಾಗಿ ಜನಪ್ರತಿನಿಧಿಗಳಾದ ನಾವು ಎಲ್ಲವನ್ನೂ ಕೇಳಿಸಿಕೊಳ್ಳಬೇಕಾಗುತ್ತಿ¤ದೆ. ಆದರೆ ಸ್ಥಳೀಯವಾಗಿಯೂ ಆಗುವ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಳ್ಳಿ ಎಂದು ಕ್ವಾರಂಟೈನ್‌ಗೆ ಬರುವವರಿಗೆ ಶಾಸಕರು ಕಿವಿಮಾತು ಹೇಳಿದರು.

Advertisement

ಅಕ್ಷರದಾಸೋಹದ ಬಿಸಿಯೂಟ, ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ಉಳಿಕೆಯಾದ ಅಕ್ಕಿ, ಬೇಳೆಯನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರುವವರ ಬಳಕೆಗೆ ನೀಡಲು ಅನುವು ಮಾಡಿಕೊಡುವಂತೆ ಶಾಸಕರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಭೆಯಿಂದಲೇ ದೂರವಾಣಿ ಮೂಲಕ ಮನವಿ ಮಾಡಿದರು.

ತಹಶೀಲ್ದಾರ್‌ ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಸದಾನಂದ ಬೈಂದೂರು, ಅರುಣ್‌ ಕುಮಾರ್‌, ಬಿಸಿಎಂ ಇಲಾಖೆಯ ಬಿ.ಎಸ್‌. ಮಾದಾರ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪರಿಸರ ಎಂಜಿನಿಯರ್‌ ರಾಘವೇಂದ್ರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಕಾನ್ಮಕ್ಕಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಜ್ಯೋತಿ ಪುತ್ರನ್‌, ಕೋಣಿ ಕೃಷ್ಣದೇವ ಕಾರಂತ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮುಖಂಡರಾದ ಗುಣರತ್ನ, ಸುರೇಶ್‌ ಶೆಟ್ಟಿ ಕಾಡೂರು, ಸುರೇಶ್‌ ಶೆಟ್ಟಿ ಬೀಜಾಡಿ, ಸುನಿಲ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ದಿವಾಕರ ಕಡ್ಗಿ, ಸುಧೀರ್‌, ಭಾಸ್ಕರ ಬಿಲ್ಲವ, ಮೋಹನದಾಸ ಶೆಣೈ, ಸದಾನಂದ ಬಳ್ಕೂರು, ಅರುಣ್‌ ಬಾಣ, ಗಿರೀಶ್‌ ಕುಂದಾಪುರ, ಅಶೋಕ್‌ ಪೂಜಾರಿ ಕೋಡಿ, ಕೃಷ್ಣ ಗೊಲ್ಲ ಅಧಿಕಾರಿ ವಿನಯ್‌ ಕುಮಾರ್‌, ಕಾಂಗ್ರೆಸ್‌ನ ಇಚ್ಛಿತಾರ್ಥ ಶೆಟ್ಟಿ, ವಿಜಯ ಪುತ್ರನ್‌,ಬಿಜೆಪಿಯ ಮೋಹನದಾಸ ಶೆಣೈ, ಉದಯ ನಾಯ್ಕ, ಸಂಪತ್‌ ಕುಮಾರ್‌ ಶೆಟ್ಟಿ,ಭರತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟು 13 ಕೇಂದ್ರಗಳು
ಕುಂದಾಪುರ ಹೋಬಳಿಯಲ್ಲಿ 492 ಜನ 13 ಕೇಂದ್ರಗಳಲ್ಲಿದ್ದು, ಇದರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 8 ಕೇಂದ್ರಗಳಿವೆ. 200 ತಟ್ಟೆಗಳನ್ನು ಸರಕಾರದಿಂದ ನೀಡಲಾಗಿದ್ದು ಎಲ್ಲ ಕ್ವಾರಂಟೈನ್‌ ಕೇಂದ್ರಗಳ ಕಸ ವಿಲೇವಾರಿ ಜವಾಬ್ದಾರಿಯನ್ನು ಒಂದೇ ಸಂಸ್ಥೆ ನಿರ್ವಹಿಸಲಿದೆ. ಇನ್ನಷ್ಟು ಕಡೆ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಿದ್ದು, ಅಲ್ಲಿಗೆ ಸ್ಥಳೀಯವಾಗಿ ಆಹಾರ ಒದಗಿಸಲು ಸ್ಥಳೀಯರ ಉಸ್ತುವಾರಿ ವಹಿಸಲು ನಿರ್ಧರಿಸಲಾಯಿತು. ಪ್ರಸ್ತುತ ಆನೆಗುಡ್ಡೆ ದೇವಾಲಯ ಊಟವನ್ನು, ಪೇಟೆ ವೆಂಕಟರಮಣ ದೇಗುಲದ ವತಿಯಿಂದ ಉಪಾಹಾರವನ್ನೂ ನೀಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next