ಗೌರಿಬಿದನೂರು: ಕೋವಿಡ್ 2ನೇಅಲೆಯು ಗ್ರಾಮೀಣ ಭಾಗದಲ್ಲಿ ವೇಗಮತ್ತು ವ್ಯಾಪಕವಾಗಿ ಹರಡುತ್ತಿದೆ.ಇದನ್ನು ನಿಯಂತ್ರಣ ಮಾಡುವ ಜವಾಬ್ದಾರಿ ಎಲ್ಲಾ ಪಂಚಾಯಿತಿ ಅಧಿಕಾರಿಗಳಮೇಲಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ಹೇಳಿದರು.
ನಗರದ ತಾಪಂ ಸಾಮರ್ಥ್ಯಸೌಧದಲ್ಲಿಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿಮಾತನಾಡಿದ ಅವರು, ತಾಲೂಕಿನಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿನಿರ್ಮಾಣ ಹಂತದಲ್ಲಿರುವ ತ್ಯಾಜ್ಯವಿಲೇ ವಾರಿ ಘಟಕ ಮೇ ಅಂತ್ಯದಲ್ಲಿಪೂರ್ಣ ಗೊಳಿಸಬೇಕು. ತಾಲೂಕಿನಲ್ಲಿನರೇಗಾ, ತ್ಯಾಜ್ಯ ವಿಲೇವಾರಿ ಘಟಕ,ಸಮು ದಾಯ ಶೌಚಾಲಯ, ಇನ್ನಿತರಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಸಾಧಿಸಬೇಕು ಎಂದರು.
ಬಾಕಿ ಮೊತ್ತ ಪಾವತಿಸಿ: ತಾಲೂಕಿನಬಹುತೇಕ ಗ್ರಾಪಂಗೆ ಜಿಪಂನಿಂದ 2019ಡಿಸೆಂಬರ್ ತಿಂಗಳಿನಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿ ಒಣ ಮತ್ತು ಹಸಿ ಕಸ ಸಂಗ್ರಹಣೆಗಾಗಿ ಡಬ್ಬ ವಿತರಿಸಲಾಗಿದೆ. ಇದಕ್ಕೆಸಂಬಂ ಧಿಸಿದಂತೆ ಬಾಕಿ ಇರುವ ಹಣವನ್ನು ಕೆಲವು ಗ್ರಾಪಂಗಳು ಇದುವರೆಗೂನೀಡಿಲ್ಲ. ಇದರಿಂದ ಗುತ್ತಿಗೆದಾರರುಅಧಿ ಕಾರಿಗಳನ್ನು ಕೋರ್ಟ್ ಮೆಟ್ಟಿಲೇರಿಸಲಿದ್ದಾರೆ.
ಬಾಕಿ ಇರುವ ಹಣವನ್ನು ಪಿಡಿಒ ಗಳು ಶೀಘ್ರ ನೀಡಬೇಕು ಎಂದುಸಿಇಒ ತಿಳಿಸಿದರು.ಜಿಪಂ ಉಪಕಾರ್ಯದರ್ಶಿ ನೋಮೇಶ್‌ಕುಮಾರ್ ಮಾತನಾಡಿ, ಕಳೆದ ವರ್ಷತಾಲೂಕಿನಲ್ಲಿ ನರೇಗಾ ಕಾಮಗಾರಿಗಳುನಿರೀಕ್ಷೆಗೂ ಮೀರಿದ ಮಾನವದಿ® ಗಳನ್ನು ಸೃಜಿಸುವ ಮೂಲಕ ಎಲ್ಲಾಅಧಿಕಾರಿಗಳು ದಾಖಲೆ ನಿರ್ಮಾಣಮಾಡಿ ದ್ದರು. ಈ ಬಾರಿ ಸರ್ಕಾರದಿಂದಗುರಿ ನೀಡಲಾಗಿದೆ.
ಎಲ್ಲರೂ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕುಎಂದು ಹೇಳಿದರು. ತಾಪಂ ಇಒ ಎನ್.ಮುನಿರಾಜು, ನರೇಗಾ ಸಹಾಯಕನಿರ್ದೇಶಕ ಪಿ. ಚಿನ್ನಪ್ಪ, ಕೃಷಿ ಇಲಾಖೆಯಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ರೇಷ್ಮೆ ಇಲಾಖೆ ಸಹಾಯಕನಿರ್ದೇಶಕ ಮುರಳೀಧರ್ ಇತರರಿದ್ದರು