Advertisement

ಸಹಕಾರ ರಂಗಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಸ್ವಾಮೀಜಿ

06:17 PM Jul 28, 2022 | Team Udayavani |

ಮುಂಡರಗಿ: ಕಣಗಿನಾಳದ ಶಿದ್ದನಗೌಡ ಪಾಟೀಲ ಅವರು ಸಹಕಾರ ಕ್ಷೇತ್ರದಲ್ಲಿ ಸೊಸೈಟಿ ಪ್ರಾರಂಭಿಸುವ ಮೂಲಕ ವಿಶ್ವಕ್ಕೇ ಮಾದರಿಯಾಗಿದ್ದಾರೆ. ಸಹಕಾರ ರಂಗಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ನುಡಿದರು. ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್‌, ಗದಗ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಳೆ ಎಪಿಎಂಸಿಯಲ್ಲಿ ಹಮ್ಮಿಕೊಂಡಿದ್ದ ಮೈಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ, ಗಂಗಾಪೂರ, ಪಿಕಾರ್ಡ್‌ ಬ್ಯಾಂಕ್‌, ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಸ್ವ- ಸಹಾಯ ಸಂಘಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ ಹಾಗೂ ಸಹಕಾರ ಧುರೀಣ ಶಿವಕುಮಾರಗೌಡ ಪಾಟೀಲ ಅವರ 55ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

Advertisement

ವ್ಯಕ್ತಿಗೆ ಪ್ರಕೃತಿಯ ಸಹಕಾರ ಅಗತ್ಯ. ಯಾಕೆಂದರೆ ಗಾಳಿ, ಬೆಳಕು, ನೀರು, ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯವಾಗಿಬೇಕು. ಅದನ್ನು ಪ್ರಕೃತಿಯ ಯಾವುದೇ ತೆರಿಗೆ ತೆಗೆದುಕೊಳ್ಳದೆ ಉಚಿತವಾಗಿ ಭೂಮಿಯ ಮೇಲೆ ಜೀವಿಸುವಂತಹ ಎಲ್ಲ ಜೀವರಾಶಿಗಳಿಗೂ ನೀಡುತ್ತದೆ. ಆರೋಗ್ಯಕರವಾದ ಜೀವನ ನಡೆಸುವುದಕ್ಕೆ ದೇಹಕ್ಕೆ ಮನಸ್ಸು ಹಾಗೂ ಆತ್ಮದ ಸಹಕಾರ ಮುಖ್ಯ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರ ಸಂರಕ್ಷಣೆ ಮಾಡಬೇಕು. ಅದನ್ನು ಅರಿಯದ ಜನರು, ದೇವರು, ಮೂಢನಂಬಿಕೆ, ಕಂದಾಚಾರ, ಸಂಪ್ರದಾಯಗಳಿಗೆ ಮಾರು ಹೋಗಿ ಸಮಯ, ಹಣ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಹಕಾರ ದೇಶದ ಆರ್ಥಿಕ ಪ್ರಗತಿಗೆ ಪೂರ್ವಕವಾಗಿದೆ. ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಸಹಕಾರ ಸಂಸ್ಥೆಗಳ ಮೂಲಕ ಮಾಡುತ್ತಿವೆ. ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಸಮಾಜ ಹಾಗೂ ದೇಶದ ಪ್ರಗತಿಗೆ ಮುಂದಾಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಮಾರ್ಗದಡಿ ಸಹಕಾರ ಸಂಘಗಳು ಪ್ರಾರಂಭವಾಗಿವೆ. ಮಹಿಳೆಯರಿಗೆ ಸ್ವಾತಂತ್ರ್ಯ ಹಾಗೂ ಸಮಾನತೆ ಕೊಟ್ಟಿದ್ದು ಬಸವಣ್ಣ. ಆದ್ದರಿಂದ ಶರಣರ ತತ್ವ ಸಿದ್ದಾಂತ, ಆದರ್ಶಗಳಡಿ ಇಂದು ಸಹಕಾರ ರಂಗ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಸಮಾಜ ಸುಧಾರಣೆಯಲ್ಲಿ ಸ್ವಾಮಿಗಳ ಹಾಗೂ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಔಷಧ ಸಸ್ಯಗಳ ಕಪ್ಪತ್ತಗುಡ್ಡದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿಗೆ ಸಹಕಾರ ಸಂಘಗಳು ಬಹಳ ಪ್ರಾಮುಖ್ಯತೆ ವಹಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕಿನ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ, ಗಂಗಾಪೂರ, ಪಿಕಾರ್ಡ್‌ ಬ್ಯಾಂಕ್‌ ಮುಂಡರಗಿ, ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಸ್ವ-ಸಹಾಯ ಸಂಘಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರಿಗೆ, ಸಂಘಗಳ ಸಿಬ್ಬಂದಿಗೆ ಸ್ವ ಸಹಾಯ ಸಂಘಗಳ ಕಾರ್ಯನಿರ್ವಾಣೆ ಕುರಿತು ಹಾಗೂ ಸಹಕಾರಿ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ, ಜವಾಬ್ದಾರಿಗಳ ಕುರಿತು ಒಂದು ದಿನದ ವಿಶೇಷ ಸಹಕಾರ ತರಬೇತಿ ನೀಡಲಾಯಿತು.

Advertisement

ಕಾರ್ಯಕ್ರಮದಲ್ಲಿ ಮಾಜಿ ಸಹಕಾರ ಸಚಿವರಾದ ಎಸ್‌.ಎಸ್‌. ಪಾಟೀಲ. ಖ್ಯಾತ ಪಾರಂಪರಿಕ ವೈದ್ಯ ಡಾ.ಲೋಕೇಶ ಟೇಕಲ್‌, ಮುಂಡರಗಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಚ್‌.ಆರ್‌.ಕಬ್ಬೇರಹಳ್ಳಿ, ಪುಲಕೇಶಿಗೌಡ ಪಾಟೀಲ, ಬಸಪ್ಪ ಕಲಗುಡಿ, ಸಿ.ಎಂ. ಪಾಟೀಲ, ಯಂಕಪ್ಪ ಹುಳಕಣ್ಣವರ, ಎಸ್‌.ಎಸ್‌.ಕಬಾಡೆ, ಆರ್‌.ಸಿ. ಯಕ್ಕುಂಡಿ, ಚಂದ್ರಶೇಖರ ಲಮಾಣಿ, ಬಿ.ಎಂ. ಮುಧೋಳ, ಕೆ.ಬಿ. ದೊಡ್ಡಮನಿ, ಎಸ್‌.ಬಿ. ಬಾರಿಕಾಯಿ, ಬಿ.ಎಸ್‌. ಸಂಶಿ, ಶಿವಾನಂದ ಹೂಗಾರ, ಪ್ರಶಾಂತ ಮುಧೋಳ, ಬಸವರಾಜ ಹೊಸಮನಿ, ಸುರೇಶ ಕ್ಯಾದಗಿಹಳ್ಳಿ, ಶೇಖರಾಜ ಹೊಸಮನಿ, ಪಿ.ಎಂ. ಪಾಟೀಲ, ಜೈನ್‌, ರಾಜು ದಾವಣಗೆರೆ, ಎಂ.ಯು. ಮಕಾಂದಾರ, ತಾಲೂಕಿನ ವಿಎಸ್‌ಎಸ್‌ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿ ಪಾಲ್ಗೊಂಡಿದ್ದರು.

ನೂರಅಹ್ಮದ ಮಕಾಂದಾರ ಸ್ವಾಗತಿಸಿ, ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next