Advertisement
ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ವಿವಿಧ ಶಿಕ್ಷಕ, ನೌಕರರ ಸಂಘಟನೆಗಳ ಸಭೆಯಲ್ಲಿ ಮಾತನಾಡಿ, ಕೋವಿಡ್ ತಡೆಗೆ ಲಸಿಕೆಯೊಂದೇ ಅಸ್ತ್ರವಾಗಿದೆ. ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದ್ದು, 18 ವರ್ಷ ಮೇಲ್ಪಟ್ಟವರು10 ರಿಂದ12 ಲಕ್ಷ ಇದ್ದಾರೆ. ಇವರೆಲ್ಲರಿಗೂ ಲಸಿಕೆ ನೀಡುವ ಮೂಲಕ ಕೋವಿಡ್ ತಡೆಯಬಹುದಾಗಿದೆ ಎಂದು ವಿತರಿಸಿದರು.
Related Articles
Advertisement
ಶಿಕ್ಷಕರು ಸಮುದಾಯಕ್ಕೆ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸುವುದು ಪುಣ್ಯದ ಕೆಲಸ,ಓರ್ವಶಿಕ್ಷಕ ದಿನಕ್ಕೆ ಕನಿಷ್ಠ 10 ಮಂದಿಗೆ ಲಸಿಕೆ ಹಾಕಿಸಿದರೆ, 15ದಿನಕ್ಕೆ ನಮ್ಮ ಗುರಿ ತಲುಪುವುದು ಸಾಧ್ಯ ಎಂದ ಅವರು, ಬುದ್ಧಿ, ಸಮಯ ಬಳಸಿ ಜೀವದಾನದ ಈಮಹತ್ಕಾರ್ಯದಲ್ಲಿ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.
ಬಿಇಒ ಕಚೇರಿ ಬಳಿ ಲಸಿಕಾ ಶಿಬಿರ: ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ, ಸರ್ಕಾರಿ, ಖಾಸಗಿ, ಅನುದಾನಿತ ಶಿಕ್ಷಕರು, ಅವರ ಕುಟುಂಬದವರಿಗೆ ಲಸಿಕೆ ಅಭಿಯಾನ ನಡೆಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಬಿಇಒ ನಾಗರಾಜಗೌಡರಿಗೆ ಅವರು ಸೂಚಿಸಿದರು.
ನೌಕರರರ ಕುಟುಂಬಕ್ಕೆ ಕೋವಿಡ್ ಕೇರ್ ಕೇಂದ್ರ: ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ಆದ್ಯತೆಯ ಮೇರೆಗೆ ಸರ್ಕಾರಿನೌಕರರಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲು ಮನವಿ ಮಾಡಿದ ಅವರು, ಜನರ ಸೇವೆ ಮಾಡುತ್ತಿರುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಸೋಂಕಿಗೆ ತುತ್ತಾದರೆಅವರ ಸೂಕ್ತ ಚಿಕಿತ್ಸೆಗಾಗಿ ಪ್ರತ್ಯೇಕ ಕೇರ್ ಸೆಂಟರ್ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಖಾಸಗಿ ಶಾಲಾ ಕಾಲೇಜು ವತಿಯಿಂದ ಸಭೆಯಲ್ಲಿ ಸಹ್ಯಾದ್ರಿ ಉದಯಕುಮಾರ್, ಎಸ್.ಬಿ. ಮುನಿವೆಂಕಟಪ್ಪ, ಮುನಿಯಪ್ಪ, ಶ್ರೀಕೃಷ್ಣ, ರಾಜೇಶ್ ಸಿಂಗ್ ಮತ್ತಿತರರು ಭಾಗವಹಿಸಿದ್ದು, ಲಸಿಕೆ ಅಭಿಯಾನಕ್ಕೆ ಸಹಕಾರದ ಭರವಸೆ ನೀಡಿದರು. ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು,ಖಜಾಂಚಿ ವಿಜಯ್, ರಾಜ್ಯ ಪರಿಷತ್ ಸದಸ್ಯ ಗೌತಮ್, ಕೆಜಿಎಫ್ ಅಧ್ಯಕ್ಷ ರವಿರೆಡ್ಡಿ, ಪ್ರಾಥಮಿಕ
ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್, ನೌಕರರ ಸಂಘ, ವೃಂದ ಸಂಘಗಲ ಮುಖಂಡರಾದ ಎಸ್.ಚೌಡಪ್ಪ, ಟಿ.ಕೆ.ನಟರಾಜ್, ರತ್ನಪ್ಪ, ಅಶ್ವತ್ಥನಾರಾಯಣ, ಸುಬ್ರಮಣಿ, ಶ್ರೀನಿವಾಸರೆಡ್ಡಿ, ಪುರುಷೋತ್ತಮ್ ,ಅಜಯ್, ರವಿ, ಮುರಳಿ ಮೋಹನ್, ನಾಗಾನಂದ್ ಕೆಂಪರಾಜ್, ಚಂದ್ರಪ್ಪ, ಗೋಪಿಕೃಷ್ಣನ್, ಮುನಿರಾಮಯ್ಯ, ಕಾಂತರಾಜ್, ರಾಜಪ್ಪ, ಅರುಣ್ ಕುಮಾರ್, ಶಿವಕುಮಾರ್, ಮುಕುಂದ, ಶ್ರೀಧರಬಾಬು ಮತ್ತಿತರರಿದ್ದರು.