Advertisement
ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಸ್ವಾಗತಿಸಿ ಮಾತನಾಡಿ, ಪ್ರತೀ ವರ್ಷದಂತೆಈ ವರ್ಷದ ಕಾರ್ಯಕ್ರಮವನ್ನುವಿಶೇಷ ರೀತಿಯಲ್ಲಿ ಶಿಸ್ತುಬದ್ಧವಾಗಿಆಯೋಜಿಸುವಲ್ಲಿ ನಾವು ಸಾಕಷ್ಟು ಪೂರ್ವ ತಯಾರಿಯನ್ನು ಮಾಡಬೇಕಾಗಿದೆ. ಈ ವರ್ಷ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮಾನ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಲಿರುವ ಈ ಉತ್ಸವದಲ್ಲಿ ಸಮಾಜದ ಗಣ್ಯ ಅತಿಥಿಗಳೂ ಪಾಲ್ಗೊಳ್ಳಲಿದ್ದಾರೆ.
Related Articles
Advertisement
ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಸುಲತಾ ಎಸ್. ಶೆಟ್ಟಿ ವಾರ್ಷಿಕೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯ ಕ್ರಮಗಳ ತಯಾರಿಯ ಬಗ್ಗೆ ಮಾಹಿತಿಯಿತ್ತರು. ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್‌ರಾಜ್ ಶೆಟ್ಟಿ ಯುವ ವಿಭಾಗದ ಕಾರ್ಯಚಟುವಟಿಕೆಗಳು ಹಾಗೂ ವಾರ್ಷಿಕೋತ್ಸವದ ತಯಾರಿಯ ಬಗ್ಗೆ ತಿಳಿಸಿದರು. ಕ್ರೀಡಾ
ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಸಂಘದ ಕ್ರೀಡಾಕೂಟದ ವರದಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಮೋಹನ್ ಶೆಟ್ಟಿ, ಪದಾಧಿಕಾರಿಗಳಾದ ಶ್ರೀನಿವಾಸ್ ಶೆಟ್ಟಿ, ತಾರಾನಾಥ ಕೆ. ರೈ ಮೇಗಿನಗುತ್ತು, ವಿಶ್ವನಾಥ್ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ಯುವ ವಿಭಾಗದ ವಿಶಾಲ್ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಚಿತ್ರಾ ಶ್ರೀನಿವಾಸ್ ಶೆಟ್ಟಿ, ಶಮ್ಮಿ ಅಜಿತ್ ಹೆಗ್ಡೆ, ದಿವ್ಯಾ ಸಂತೋಷ್ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ವಾರ್ಷಿಕೋತ್ಸವದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
ಚಿತ್ರ-ವರದಿ: ಕಿರಣ್ ಬಿ. ರೈ ಪುಣೆ