ಮುಂಬೈ: ಸದ್ಯದಲ್ಲೇ ಬಿಡುಗಡೆಯಾಗಬೇಕಿರುವ ಸಲ್ಮಾನ್ ಖಾನ್ ನಟನೆಯ ಬಾಲಿವುಡ್ ಸಿನಿಮಾ ಕಿಸೀ ಕೀ ಬಾಯಿ, ಕಿಸೀ ಕೀ ಜಾನ್ ಚಿತ್ರ ಸಣ್ಣ ವಿವಾದವನ್ನು ಹುಟ್ಟು ಹಾಕಿದೆ.
Advertisement
ಆ ಚಿತ್ರದಲ್ಲಿ ಯೇಂಟಮ್ಮ ಎಂಬ ಹಾಡಿದೆ. ಅದರಲ್ಲಿ ರಾಮ್‌ಚರಣ್ ತೇಜ, ವಿಕ್ಟರಿ ವೆಂಕಟೇಶ್ ಪಂಚೆ ಕಟ್ಟಿಕೊಂಡು ಸಲ್ಮಾನ್ ಖಾನ್‌ರೊಂದಿಗೆ ಕುಣಿಯುತ್ತಾರೆ. “ನಾಚೇಂಗೆ ಅಪ್ನಿ, ಉಟಾ ಕರ್ಕೆ ಲುಂಗಿ’ ಹಾಡಿನಲ್ಲಿ ಪಂಚೆಗೆ ಲುಂಗಿ ಅಂದಿರುವುದೇ ಸಿಟ್ಟಿಗೆ ಕಾರಣ. ಪಂಚೆಯನ್ನು ಶುಭ ಸಮಾರಂಭದಲ್ಲಿ ಬಳಸುತ್ತಾರೆ. ಲುಂಗಿಯನ್ನು ಮಾಮೂಲಿ ದಿರಿಸಿನಂತೆ ಬಳಸುತ್ತಾರೆ. ಹಾಗಿರುವಾಗ ಪಂಚೆಯನ್ನು ತೋರಿಸಿ, ಲುಂಗಿ ಎಂದಿರುವುದು ಎಷ್ಟು ಸರಿ ಎನ್ನುವುದು ಕೆಲವರ ವಾದ.