Advertisement

ಈ ರಾಜ್ಯ ನೀಡುತ್ತಿದೆ ಎನ್‌ ಎಚ್‌ ಎಂ ನ ಗುತ್ತಿಗೆ ನೌಕರರಿಗೆ ನೀಡುತ್ತಿದೆ ಬಂಪರ್ ಬೋನಸ್..!

03:54 PM Jul 11, 2021 | |

ನವ ದೆಹಲಿ : ರಾಜಸ್ಥಾನ ಸರ್ಕಾರ ಗುತ್ತಿಗೆ ನೌಕರರಿಗೆ ಹೆಚ್ಚಿನ ಬಿಡುವು ನೀಡುವ ಪ್ರಯತ್ನದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ ಎಚ್‌ ಎಂ) ನಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೆ ಬೋನಸ್ ಘೋಷಿಸಿದೆ.

Advertisement

ರಾಜ್ಯದ ಗುತ್ತಿಗೆ ನೌಕರರ ಖಾತೆಗಳಲ್ಲಿ ಒಂದು ಬಾರಿ ಬೋನಸ್ ವರ್ಗಾವಣೆ ಮಾಡುವ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.

ಮಾರ್ಚ್ 31, 2021 ರಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ ಎಚ್‌ ಎಂ) ನಲ್ಲಿ ಮೂರರಿಂದ ಐದು ವರ್ಷಗಳ ಸೇವೆಯನ್ನು ಪೂರೈಸಿದ ಗುತ್ತಿಗೆ ಸಿಬ್ ಒಂದು ಬಾರಿ ನಿಷ್ಠೆ ಮತ್ತು ಅನುಭವ ಆಧಾರಿತ ಬೋನಸ್ ಪಡೆಯಲಿದ್ದಾರೆ ಎಂದು ರಾಜಸ್ಥಾನ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಕೋವಿಡ್ ಸಂಕಷ್ಟದಲ್ಲಿನ ಆದಿವಾಸಿಗಳಿಗೆ ನೆರವು ನೀಡಿದ ಐಟಿಫಾರ್ ಚೇಂಜ್‌ನ ಶ್ರೀಜಾ

ಇನ್ನು, ಮಾರ್ಚ್ 31, 2017 ರವರೆಗೆ ಈಗಾಗಲೇ ಪ್ರಯೋಜನಗಳನ್ನು ಪಡೆದಿರುವ ರಾಷ್ಟ್ರೀಯ ಆರೋಗ್ಯ ಮಿಷನ್ ಅಥವಾ ಎನ್‌ ಎಚ್‌ ಎಂ ನ ಗುತ್ತಿಗೆ ಪಡೆದ ನೌಕರರು ಈ ಪ್ರಯೋಜನ ಪಡೆಯಲಿದ್ದಾರೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದ್ದಾರೆ.

Advertisement

ರಾಷ್ಟ್ರೀಯ ಆರೋಗ್ಯ ಮಿಷನ್ ನ ನೌಕರರು ಪಡೆಯುವ ಬೋನಸ್ ಎಷ್ಟು..?

ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಮಾರ್ಚ್ 31, 2021 ರವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್  (ಎನ್‌ಎಚ್‌ಎಂ)ನ ಗುತ್ತಿಗೆ ನೌಕರರು ಶೇಕಡಾ 10 ದರದಲ್ಲಿ ಬೋನಸ್ ಪಡೆಯುತ್ತಾರೆ ಹಾಗೂ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದವರು ಶೇಕಡಾ 15 ರಷ್ಟು ಬೋನಸ್ ನನ್ನು ಪಡೆಯಲಿದ್ದಾರೆ.

ಇನ್ನು, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ ಎಚ್‌ ಎಂ) ನ ಗುತ್ತಿಗೆ ನೌಕರರಿಗೆ ಮಿಷನ್‌ ನಲ್ಲಿನ ಅನುಭವ ಅಥವಾ ಸೇವೆ ಸಲ್ಲಿಸಿದ ವರ್ಷಗಳ ಆಧಾರದ ಮೇಲೆ ಒಂದು ಬಾರಿ ಬೋನಸ್ ನೀಡಲು ರಾಜಸ್ಥಾನ ರಾಜ್ಯ ಸರ್ಕಾರ ಒಟ್ಟು 987.62 ಲಕ್ಷ ರೂಪಾಯಿಯನ್ನು ವ್ಯಯ ಮಾಡುತ್ತಿದೆ ಎನ್ನುವುದು ವಿಶೇಷ.

ಇದನ್ನೂ ಓದಿ : ಗೋಪಾಲ ಸ್ವಾಮಿ ಬೆಟ್ಟದಲ್ಲಿ ಹಳ್ಳಕ್ಕೆ ಜಾರಿದ ಬಸ್: ಅಪಾಯದಿಂದ ಪಾರಾದ ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next