Advertisement
ರಾಜ್ಯದಲ್ಲಿ 40 ಪರ್ಸೆಂಟ್ ಹಗರಣದ ಆರೋಪ ಕೇಳಿ ಬಂದ ಅನಂತರ ಸೋಮವಾರ ಮುಖ್ಯಮಂತ್ರಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಪ್ರಭಾವಿ ಹಾಗೂ ಲಂಚ ಕೊಟ್ಟು ಹಣ ಬಿಡುಗಡೆ ಮಾಡಿಸಿಕೊಳ್ಳುವ ವ್ಯವಸ್ಥೆಗೆ ತಡೆಯೊಡ್ಡಬೇಕು ಹಾಗೂ ಪ್ರಮುಖ ಇಲಾಖೆಗಳಲ್ಲಿ ಜಾರಿಯಲ್ಲಿರುವ 40 ಪರ್ಸೆಂಟ್ ಲಂಚದ ವ್ಯವಸ್ಥೆಯನ್ನು ನಿಯಂತ್ರಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.
Related Articles
Advertisement
ರಿವೈಸ್ಡ್ ಎಸ್ಟಿಮೇಷನ್ ಮಾಡುವುದರಿಂದಲೂ ಭ್ರಷ್ಟಾಚಾರ ಹೆಚ್ಚಾಗಲಿದೆ. ರಿವೈಸ್ಡ್ ಎಸ್ಟಿಮೇಷನ್ ಮಾಡಬಾರದು ಎಂದು ಮನವಿ ಮಾಡಿದ್ದೇವೆ ಎಂದರು.
40 ಪರ್ಸೆಂಟ್: ಹೇಳಿಕೆಗೆ ಬದ್ಧರಾಜ್ಯದಲ್ಲಿ ಕಾಮಗಾರಿಗಳಿಗೆ 40 ಪರ್ಸೆಂಟ್ ಲಂಚ ಪಡೆಯುತ್ತಿರುವುದರ ಬಗ್ಗೆ ಹೇಳಿಕೆಗೆ ಈಗಲೂ ನಾನು ಬದ್ಧನಾಗಿರುವೆ. ಮೇ 11ರಂದು ಗುತ್ತಿಗೆದಾರರ ಸಭೆ ಕರೆದು ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. ಅಲ್ಲದೇ ನಾವು ಆರೋಪ ಮಾಡಿರುವ ಇಲಾಖೆಗಳ ಕುರಿತು ದಾಖಲೆಗಳನ್ನು ನೀಡಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡುವಂತೆ ಮನವಿ ಮಾಡಿದ್ದೇವೆ. ಆ ಸಮಿತಿ ರಚನೆ ಮಾಡಿದರೆ, ಅಲ್ಲಿಗೆ ದಾಖಲೆಗಳನ್ನು ಒದಗಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು.