Advertisement

ಸಂತೋಷ್ ಪಾಟೀಲ್ ಕೇಸ್: ಕೋರ್ಟ್ ನಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ; ಈಶ್ವರಪ್ಪ

03:52 PM Aug 24, 2022 | Team Udayavani |

ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಈಶ್ವರಪ್ಪ ವಿರುದ್ಧ  ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅರ್ಜಿ ಸಲ್ಲಿಸಿದ್ದಾರೆ.

Advertisement

ಈ ಸಂಬಂಧ ಮಾತಾನಾಡಿದ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ , ನನ್ನ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದಿದ್ರೇ ತಪ್ಪಾಗುತ್ತದೆ. ಎಫ್ಐಆರ್ ದಾಖಲಾಗಿದೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗಿನ ಗೃಹಮಂತ್ರಿ ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ರಾಜೀನಾಮೆ ಕೊಟ್ಟಿದ್ದರು. ಗಣಪತಿ ಅವರೇ ಡೆತ್ ನೋಟ್ ಬರೆದಿಟ್ಟಿದ್ದರು. ನಾನು ವಿಪಕ್ಷ ಸ್ಥಾನದಲ್ಲಿದ್ದು, ರಾಜೀನಾಮೆ ಕೊಡಿ ಎಂದು ಜಾರ್ಜ್ ಅವರಿಗೆ ಒತ್ತಾಯ ಮಾಡಿದ್ದೆ. ಅವರು ತನಿಖೆಯಲ್ಲಿ ಕ್ಲೀನ್ ಚಿಟ್  ಪಡೆದು, ಮತ್ತೇ ಕ್ಯಾಬಿನೆಟ್ ಸೇರಿಕೊಂಡರು. ಈಗ ಪ್ರಶ್ನೆ ಬಂದಿರೋದು ನನ್ನ ಮೇಲೆ ಬಂದಿರುವ ಆಪಾದನೆ. ಸಂತೋಷ್ ಗೂ ನನಗೂ ಸಂಬಂಧವೇ ಇಲ್ಲ ಎಂದು ಯಾರಿಗೆ ಹೇಳಬೇಕೋ ಹೇಳಿದ್ದೇನೆ. ತನಿಖಾಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟ ಪಡಿಸಿದ್ದೇನೆ ಎಂದರು.

ಇದನ್ನೂ ಓದಿ13 ವರ್ಷದ ಬಳಿಕ ಮತ್ತೆ ರೀ-ರಿಲೀಸ್‌ ಆಗುತ್ತಿದೆ “ಅವತಾರ್”‌ : ಹೊಸ ಟ್ರೇಲರ್‌ ಔಟ್

ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂದು ತನಿಖೆಯ ರಿಪೋರ್ಟ್ ನಿಂದ ಗೊತ್ತಾಗಬೇಕು. ಅದು ನನಗೆ ಗೊತ್ತಿಲ್ಲ. ಒಟ್ಟಾರೆ ವಾಟ್ಸಪ್ ನಲ್ಲಿ ನನ್ನ ಹೆಸರಿತ್ತು. ರಾಷ್ಟ್ರೀಯ ನಾಯಕರ ಅನುಮತಿ ಪಡೆದು, ರಾಜೀನಾಮೆ ಕೊಟ್ಟೆ. ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿತು. ಮುಕ್ತವಾಗಿ ಹೊರಬಂದಿದ್ದೇನೆ. ಅವರಿಗೆ ಕೋರ್ಟ್ ಹೋಗುವ ಅಧಿಕಾರ ಇದೆ ಹೋಗಿದ್ದಾರೆ.  ಕೋರ್ಟ್ ನಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ಹೇಳಿದರು.

ನಾನು ತಪ್ಪಿತಸ್ಥ ಅಲ್ಲ.‌ ಸ್ಪಷ್ಟವಾದ ಆದೇಶ ಸಿಗುತ್ತದೆ ಎಂಬ ವಿಶ್ವಾಸ ಇದೆ. ಕ್ಲೀನ್ ಚಿಟ್ ಸಿಗುವವರೆಗೂ ಒಂದು ಆರೋಪ ಮಾಡಿದ್ದರು ಸಿಕ್ಕಮೇಲೆ ಮತ್ತೊಂದಿಷ್ಟು ಆಪಾದನೆ ಮಾಡುತ್ತಿದ್ದಾರೆ‌. ಅವರಿಗೆ ಏನೇ ಆಪಾದನೆ ಮಾಡಲು ಪೂರ್ಣ ಸ್ವಾತಂತ್ರ್ಯ ಇದೆ. ನನಗೆ ಜವಾಬ್ದಾರಿ ಕೊಡುವುದು, ಮಂತ್ರಿ ಸ್ಥಾನ ಸಿಗುವುದು ಬಿಡುವು ಬೇರೆ ಕೋರ್ಟ್ ಕೂಡ ತ್ವರಿತವಾಗಿ ತೀರ್ಪು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next