Advertisement
ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆ ಯವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನಲೆಯಲ್ಲಿ ಹೆದ್ದಾರಿ ಇಲಾಖೆಯ ವಿನ್ಯಾಸದ ಪ್ರಕಾರ ಹಲವೆಡೆ ರಸ್ತೆಯನ್ನು ಮಣ್ಣು ಹಾಕಿ ಎತ್ತರಿಸಲಾಗಿದೆ. ಕೆಲವೆಡೆ ರಸ್ತೆ ಬದಿಯ ಗುಡ್ಡಗಳನ್ನು ಜೆಸಿಬಿ ಮೂಲಕ ಅಗೆದು ಇಳಿಜಾರು ಹಾಗೂ ತಗ್ಗು ಪ್ರದೇಶಗಳಿಗೆ ತುಂಬಲಾಗುತ್ತಿದೆ. ಇದೀಗ ಸುರಿಯುತ್ತಿರುವ ಮಳೆಗೆ ರಸ್ತೆ ಪಕ್ಕ ಹಾಕಿರುವ ಮಣ್ಣು ಇಳಿಜಾರು ಮೂಲಕ ಕೆಳ ಭಾಗದಲ್ಲಿರುವ ಮನೆ ಅಂಗಳಕ್ಕೆ ಜಾರಿದ್ದು, ದೂರು ಗಳು ಕೇಳಿ ಬರುತ್ತಿವೆ. ಮನೆಗೆ ಸಂಪರ್ಕಿಸುವ ದಾರಿಯಲ್ಲಿ ಮಣ್ಣು ತುಂಬಿಕೊಂಡು ಸಂಪರ್ಕ ಕಡಿತಗೊಂಡಿದೆ. ತಮ್ಮ ವಾಹನಗಳನ್ನು ಮನೆಯಂಗಳಕ್ಕೆ ಕೊಂಡೊಯ್ಯಲು ಸಾಧ್ಯ ವಾಗದೆ ಎಲ್ಲೆಲ್ಲೋ ಇಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವೆಡೆ ರಸ್ತೆ ಪಕ್ಕದ ತೋಟಗಳಿಗೂ ಮಣ್ಣು ಕುಸಿದಿದೆ. ಭಾರೀ ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸ ಬಹುದು ಎನ್ನುವುದು ಸ್ಥಳೀಯರ ದೂರು.
ಎನ್.ಸಿ. ರೋಡ್‌ನಲ್ಲಿ ರಸ್ತೆ ವಿಸ್ತರಣೆಗೊಂಡಿದ್ದು, ಸರಿ ಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮತ್ತು ಅಂಗಡಿಗಳಿಗೆ ನೀರು ನುಗ್ಗು ತ್ತಿದೆ. ಮಳೆಗಾಲದಲ್ಲಿ ಇಂತಹ ಸಮಸ್ಯೆ ತಲೆದೋರುವ ಬಗ್ಗೆ ಉದಯವಾಣಿ ಮಳೆಗಾಲ ಆರಂಭಕ್ಕೆ ಮುನ್ನ ಎಚ್ಚರಿಸಿತ್ತು. ವಿದ್ಯುತ್ ಕಂಬ ಸ್ಥಳಾಂತರ
ಪುಂಜಾಲಕಟ್ಟೆ ಮೊದಲಾಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೆಲವೆಡೆ ಹೊಸ ಹಾಗೂ ಎತ್ತರದ ಕಂಬಗಳನ್ನು ಅಳವಡಿಸಲಾಗುತ್ತಿದೆ. ಪುಂಜಾಲಕಟ್ಟೆ ಯ ದೈಕಿನಕಟ್ಟೆ ಬಳಿ ರಸ್ತೆಯನ್ನು ತುಂಬಾ ಎತ್ತರಿಸಲಾಗಿದ್ದು, ಮನೆ ಅಂಗಳದ ಮುಂದಕ್ಕೆ ರಸ್ತೆ ಹಾದು ಹೋಗುತ್ತದೆ. ರಸ್ತೆ ಪಕ್ಕ ಹಾಕಿರುವ ಮಣ್ಣುಗಳು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೂ ಮನೆ ಮಂದಿಯಲ್ಲಿ ಭಯ ಮನೆ ಮಾಡಿದೆ.
Related Articles
Advertisement
ಅಪಾಯ ಆಹ್ವಾನಿಸುತ್ತಿವೆ ಮರಗಳುಬಡಗುಂಡಿ ಮೊದಲಾದ ಕಡೆಗಳಲ್ಲಿ ರಸ್ತೆ ಬದಿಯ ಗುಡ್ಡಗಳನ್ನು ಜೆಸಿಬಿ ಮೂಲಕ ಅಗೆದು ತಗ್ಗು ಪ್ರದೇಶಗಳಲ್ಲಿ ರಸ್ತೆ ಇಕ್ಕೆಲಗಳಿಗೆ ತುಂಬಲಾಗುತ್ತಿದೆ. ಅವೈಜ್ಞಾನಿಕ ವಾಗಿ ಮಣ್ಣು ಅಗೆದಿರುವುದರಿಂದ ಮಣ್ಣು ತೆರವುಗೊಳಿಸಿದ ಎತ್ತರದ ಸ್ಥಳದಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ರಸ್ತೆಗೆ ಉರುಳಿ ಬೀಳಬಹುದಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಳಭಾಗ ದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅಪಾಯ ಆಹ್ವಾನಿಸುತ್ತಿದೆ. ರತ್ನದೇವ್ ಪುಂಜಾಲಕಟ್ಟೆ