Advertisement

ಕಾಂಟ್ರ್ಯಾಕ್ಟ್ ಹಾಡುಗಳ ಚಿತ್ರೀಕರಣ

11:15 AM Apr 02, 2018 | |

ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿರುವ “ಕಾಂಟ್ರ್ಯಾಕ್ಟ್’ ಚಿತ್ರ ಆರಂಭವಾಗಿರುವ ಸುದ್ದಿಯನ್ನು ನೀವು ಈ ಹಿಂದೆಯೇ ಕೇಳಿದ್ದೀರಿ. ಆರಂಭದಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡಿದ ಈ ಚಿತ್ರ ಆ ನಂತರ ಏನಾಯಿತೆಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಚಿತ್ರ ಚಿತ್ರೀಕರಣದಲ್ಲಿ ಬಿಝಿಯಾಗಿದೆ. ಚಿತ್ರದ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ.

Advertisement

ಚಿತ್ರಕ್ಕಾಗಿ ಶಶಿ ಅವರು ಬರೆದಿರುವ “ಗಂಡು ಕೇಳದ ಸಂಭ್ರಮದ ಮ್ಯಾಟರ್‌ ತಂದಿರುವೆ ಎಂಬ ಹಾಡಿನ ಚಿತ್ರೀಕರಣ ಕನಕಪುರದ ಬಳಿಯಿರುವ ಕಗ್ಗಲಿಪುರದಲ್ಲಿ ನಡೆದಿದೆ. ಅರ್ಜುನ್‌ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ ಚಕ್ರವರ್ತಿ, ರಾಂಜಗನ್‌, ಸಮೀರ್‌, ಹಿರಿಯ ನಿರ್ದೇಶಕ ಕೆ.ವಿಶ್ವನಾಥ್‌ ಹಾಗೂ 200ಕ್ಕೂ ಅಧಿಕ ನೃತ್ಯ ಕಲಾವಿದರು ಅಭಿನಯಿಸಿದ ಈ ಹಾಡಿಗೆ ಅಮ್ಮ ರಾಜಶೇಖರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮೂರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ. ಈ ಚಿತ್ರವನ್ನು ಸಮೀರ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸಮೀರ್‌ ಅವರು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಅರ್ಜುನ್‌ ಸರ್ಜಾ, ರಾಧಿಕಾ, ಜೆ.ಡಿ.ಚಕ್ರವರ್ತಿ, ಅಮೀರ್‌ ಖಾನ್‌ ಸಹೋದರ್‌ ಫೈಸಲ್‌ ಖಾನ್‌, ಸಮೀರ್‌ ಮುಂತಾದವರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next