Advertisement

ಹಿರಿಯಡಕ ಪುತ್ತಿಗೆ ರಸ್ತೆ ಬದಿಯಲ್ಲಿ ನಿರಂತರ ನಿಂತ ನೀರು !

03:51 PM May 30, 2019 | sudhir |

ಹೆಬ್ರಿ: ಒಂದೆಡೆ ಬೇಸಿಗೆಯ ಬಿಸಿಲಿನ ತಾಪ, ಇನ್ನೊಂದೆಡೆ ಬತ್ತಿದ ಬಾವಿಕೆರೆಗಳಿಂದ ಕುಡಿಯುವ ನೀರಿಗೆ ಪರಾದಾಡುವ ಜನ ಆದರೆ ಬೊಮ್ಮರಬೆಟ್ಟು ಗ್ರಾ.ಪಂ.ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆ ಸಮೀಪದ ರಸ್ತೆ ಬದಿಯ ಹೊಂಡದಲ್ಲಿ ಕಡು ಬೇಸಿಗೆಯಲ್ಲೂ ದಿನದ 24 ಗಂಟೆ ನೀರು ನಿಲ್ಲುತ್ತಿದ್ದು ಅಚ್ಚರಿ ಮೂಡಿಸಿದೆ.

Advertisement

ಹಿರಿಯಡ್ಕದಿಂದ ಪೆರ್ಡೂರು ಮಾರ್ಗವಾಗಿ ಹೋಗುವಾಗ ರಸ್ತೆಯ ಬಲ ಬದಿಯಲ್ಲಿ ರಸ್ತೆಯಿಂದ ಕೆಲವೇ ಮೀಟರ್‌ ದೂರದಲ್ಲಿ ಚರಂಡಿಯಾಕರದ ಹೊಂಡದಲ್ಲಿ ನೀರುನಿಂತಿದೆ. ಕೇವಲ ಹೊಂಡ ತುಂಬಿ ನೀರು ನಿಂತಿದೆ ವಿನ: ಹರಿಯುವುದಿಲ್ಲ ಮಾತ್ರವಲ್ಲ ಇಂಗುವುದೂ ಇಲ್ಲ .ಈ ನೀರು ಎಲ್ಲಿಂದ ಬರುತ್ತದೆ ಅನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಪಂಚಾಯತ್‌ ಪೈಪ್‌ಲೈನ್‌ ಸಮಸ್ಯೆ
ಪುತ್ತಿಗೆಯಲ್ಲಿ ರಸ್ತೆಯಂಚಿನಲ್ಲಿ ಬೊಮ್ಮರಬೆಟ್ಟು ಪಂಚಾಯತ್‌ನ ನೀರು ಸರಬರಾಜು ಪೈಪ್‌ಲೈನ್‌ ಪುತ್ತಿಗೆಯಲ್ಲಿ ಹಾದು ಹೋಗಿದೆ. ಈ ಪೈಪ್‌ಲೈನ್‌ ಆಗಾಗ ಒಡೆದು ಹೋಗಿ ಬಳಿಕ ಅದನ್ನು ದುರಸ್ತಿ ಮಾಡಲಾಗುತ್ತದೆ. ದುರಸ್ತಿಯಾದ ಕೆಲವೇ ಸಮಯದಲ್ಲಿ ಪೈಪ್‌ ಮತ್ತೆ ಒಡೆಯುತ್ತದೆ.ಇದೇ ಸಮಸ್ಯೆಯಿಂದ ಮಳೆಗಾಲ, ಬೇಸಗೆ ಕಾಲ ಎನ್ನದೇ ವರ್ಷವಿಡೀ ಈ ಪ್ರದೇಶದಲ್ಲಿ ನೀರು ನಿಂತಿರುತ್ತದೆ ಎಂದು ಸ್ಥಳೀಯ ಮನೆಯವರು ಹೇಳುತ್ತಾರೆ.

ವರ್ಷವಿಡೀ ನೀರು
ಈ ಭಾಗದಲ್ಲಿ ಹಾದು ಹೋದ ಪೈಪ್‌ಲೈನ್‌ ಹಾನಿಗೊಂಡು ವರ್ಷವಿಡಿ ನೀರು ಪೋಲಾಗುತ್ತಿದೆ. ನೀರು ಈ ಬಗ್ಗೆ ಪಂಚಾಯತ್‌ ಗಮನ ಹರಿಸದಿರುವುದು ಅಚ್ಚರಿ ಮೂಡಿಸಿದೆ. ಸಮಸ್ಯೆ ಬಗ್ಗೆ ಪಂಪ್‌ ಆಪರೇಟರ್‌ ಅವರಲ್ಲಿ ಕೇಳಿದಾಗ ಈ ಭಾಗದ ಪೈಪ್‌ಲೈನ್‌ ಸಮಸ್ಯೆ ಇದೇ ಇನ್ನರೆಡು ದಿನಗಳಲ್ಲಿ ದುರಸ್ಥಿ ಮಾಡಲಾಗುವುದು ಎನ್ನುವ ಉತ್ತರ ನೀಡಿದ್ದಾರೆ. ಪಂಚಾಯತ್‌ ಸಿಬ್ಬಂದಿ ಉತ್ತರಿಸುತ್ತಾರೆ.

ಪಂಚಾಯತ್‌ ನಿರ್ಲಕ್ಷ
ಕುಡಿಯುವ ನೀರಿಗೆ ಸಮಸ್ಯೆ ಇರುವ ಸಂದರ್ಭದಲ್ಲಿ ಇಲ್ಲಿ ನೀರು ವ್ಯರ್ಥವಾಗುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪಂಚಾಯತ್‌ ವರ್ಷಗಳಿಂದ ರಸ್ತೆ ಬದಿಯಲ್ಲಿ ನಿಲ್ಲುತ್ತಿರುವ ನೀರನ್ನು ಗಮನ ಹರಿಸದೆ ಇರುವುದು ಪಂಚಾಯತ್‌ ನಿರ್ಲಕ್ಷಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಇನ್ನಾದರೂ ಈ ಭಾಗದ ಜನಪ್ರತಿ ನಿಧಿಗಳು ಹಾಗೂ ಸ್ಥಳೀಯ ಪಂಚಾಯತ್‌ ಆಡಳಿತ ಇತ್ತ ಗಮನ ಹರಿಸಿ ಕೂಡಲೇ ಪೈಪ್‌ಲೈನ್‌ನ್ನು ದುರಸ್ಥಿ ಮಾಡಿ ಪೋಲಾ ಗುತ್ತಿರುವ ನೀರನ್ನು ಸಮಸ್ಯೆ ಇರುವ ಜಾಗಕ್ಕೆ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮಸ್ಯೆ ಬಗೆರಹರಿಸುವ
ಇಲ್ಲಿ ನೀರು ವ್ಯರ್ಥವಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಯಾವದರಿಂದ ಸಮಸ್ಯೆಯಾಗುತ್ತಿದೆ ಎಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇನೆ .
– ರಾಜ್‌ಶೇಖರ್‌, ಪಂಚಾಯತ್‌ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next