ದೊಡ್ಡಬಳ್ಳಾಪುರ: ಕೋವಿಡ್ 19ನಾ ಲಾಕ್‌ಡೌನ್ ಪರಿಣಾಮದಿಂದ ರಾಜ್ಯ ಸಾರಿಗೆ ಸಂಸ್ಥೆ 2600 ಕೋಟಿ ರೂ. ನಷ್ಟ ಅನುಭವಿಸಿದ್ದು, ಸಿಬ್ಬಂ ದಿಯ 2 ತಿಂಗಳ ವೇತನ ಸರ್ಕಾರವೇ ನೀ ಡಿದೆ. ಈ ತಿಂಗಳಿನಿಂದ ಸಿಬ್ಬಂದಿ ವೇತನ ಶೇ.75ರಷ್ಟು ಸರ್ಕಾರ ಭರಿಸಿದರೆ ಉಳಿದ ದ್ದನ್ನು ಸಾರಿಗೆ ಸಂಸ್ಥೆ ಭರಿಸುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದ ಸಿದ್ದಲಿಂಗಯ್ಯ ವೃತ್ತದ ಬಳಿ ರಾಜ್ಯ ಸಾರಿಗೆ ಸಂಸ್ಥೆಯ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ -19 ಲಾಕ್‌ಡೌನ್ ಪರಿಣಾಮ ಸಾರಿಗೆ ಸಂಸ್ಥೆ 2600 ಕೋಟಿ ರೂ., ನಷ್ಟ ಅನುಭವಿಸಿದೆ. ಪ್ರತಿ ತಿಂಗಳು 326 ಕೋಟಿ ರೂ.ಗಳನ್ನು ಸಿಬ್ಬಂದಿಗೆ ವೇತನ ನೀಡಬೇಕಿದೆ. ಲಾಕ್ ಡೌನ್ ತೆರವಾದ ನಂತರದ 2 ತಿಂಗಳು ಸರ್ಕಾರವೇ ಈ ವೆಚ್ಚ ಭರಿಸಿದೆ. ಈ ಸಂಸ್ಥೆಗೆ ಬರುತ್ತಿರುವ ಆದಾಯ ತೀವ್ರ ಕುಸಿದಿದ್ದು ಬಸ್‌ನ ಡೀಸೆಲ್‌ಗೂ ಸಾಲುತ್ತಿಲ್ಲ. ಇದಲ್ಲದೇ ಸಂಸ್ಥೆಯ ನಿರ್ವಹಣಾ ವೆಚ್ಚ ತೂಗಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.
ಸುಸಜ್ಜಿತ ಬಸ್ ನಿಲ್ದಾಣದ ಭರವಸೆ: ಬೆಳೆಯುತ್ತಿರುವ ನಗರಕ್ಕೆ ಇನ್ನೂ ಸುಸುಜ್ಜಿತ ಬಸ್ ನಿಲ್ದಾಣ ಬೇಕು ಎಂಬ ಶಾಸಕರ ಮನವಿಗೆ, ಹೊಸ ಬಸ್ ನಿಲ್ದಾಣಕ್ಕೆ ಜಾಗ ಒದಗಿಸಿಕೊಟ್ಟರೆ ಕೋವಿಡ್-19 ಸಂಕಷ್ಟ ದಿಂದ ಎಲ್ಲಾ ತಿಳಿಯಾದ ನಂತರ ಬಸ್ ನಿಲ್ದಾ ಣ ನಿರ್ಮಿಸಿಕೊಡುವ ಭರವಸೆ ನೀಡಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಈ ನಿಲ್ದಾಣಕ್ಕೆ ಜಾಗ ಒದಗಿಸಲು ಹೆಚ್ಚು ಶ್ರಮ ಪಡೆಬೇಕಾಯಿತು.
ಈ ಹಿಂದೆ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರು ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ರಿಗೆ ಕೆಇಬಿ ಜಾಗ ತೆರವು ಮಾಡುವ ಬಗ್ಗೆ ಮಾಡಿದ್ದ ಮನವಿ ತಿರಸ್ಕಾರವಾಗಿತ್ತು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ರಾಮಲಿಂ ಗಾರೆಡ್ಡಿ ಸಾರಿಗೆ ಸಚಿವರಾಗಿದ್ದರು. ಬೆಸ್ಕಾಂಗೆ ಬೇರೆ ಕಡೆ ಜಾಗ ನೀಡಿ, ಈ ಜಾಗದಲ್ಲಿ ಬಸ್ ನಿಲ್ದಾಣ ಮಾಡುವ ಒಪ್ಪಂದವಾಯಿತು. ನಗ ರಸಭೆಗೆ 20 ಅಂಗಡಿ ಗಳ ಜಾಗ ನೀಡಲಾಗಿದೆ ಎಂದು ಸ್ಮರಿಸಿದರು.
ಆದರೆ ಬೆಳೆಯುತ್ತಿರುವ ತಾಲೂಕಿಗೆ ಈ ಬಸ್ ನಿಲ್ದಾಣ ಸಾಲದಾಗಿದ್ದು, ಹಳೇ ಬಸ್ ನಿಲ್ದಾಣದ ಅಭಿವೃದ್ಧಿಗೆ ಸಚಿವರು 1 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಇನ್ನೂ 2 ಎಕರೆ ಜಾಗದಲ್ಲಿ ದೊಡ್ಡ ಬಸ್ ನಿಲ್ದಾಣ ಮಾಡುವ ಯೋಜನೆಯಿದ್ದು ಸಚಿವರು ಮಂಜೂರು ಮಾಡಬೇಕೆಂದರು. ತಾಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ನೇಕಾರರಿದ್ದು ಕೋವಿಡ್ 19ನಾ ಪರಿಣಾಮ ನೇಕಾರಿಕೆ ನೆಲ ಕಚ್ಚಿದೆ. ಆಂಧ್ರ, ತಮಿಳುನಾಡು ರೀತಿಯಲ್ಲಿ ನೆರವು ನೀಡಬೇಕೆಂದು ಮನವಿ ಮಾಡಿದರು.
ಜಿಪಂ ಸದಸ್ಯೆ ಪದ್ಮಾವತಿ, ಎಪಿ ಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ದೊxಬಳ್ಳಾ ಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ನಗರ ಸಭೆ ಪೌರಾ ಯುಕ್ತ ರಮೇಶ್ ಎಸ್.ಸುಣ ಗಾರ್, ಸಾರಿಗೆ ಇಲಾಖೆ ಚಿಕ್ಕಬಳ್ಳಾಪುರ ವಿಭಾ ಗದ ನಿಯಂತ್ರ ಣಾಧಿಕಾರಿ ಡಿ.ವಿ.ಬಸವರಾಜ್, ಮುಖ್ಯ ಅಭಿಯಂತರ ಜಗದೀಶ್‌ಚಂದ್ರ, ದೊಡ್ಡಬಳ್ಳಾ ಪುರ ಘಟಕ ವ್ಯವಸ್ಥಾಪಕ ಎಂ.ಬಿ.ಆನಂದ್, ಮನೋಹರ್ ಮತ್ತಿತರರಿದ್ದರು.