Advertisement
ಕಾಸರಗೋಡು ವಿದ್ಯಾನಗರದ ಇಂಡಸ್ಟ್ರಿಯಲ್ ಎಸ್ಟೇಟ್ ಒಳಗಡೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಕಿರು ಗೇಟಿನ ಪರಿಸರದಲ್ಲಿ ಬೃಹತ್ ಮರವೊಂದು ಬುಡ ಸಹಿತ ಉರುಳಿ ರಸ್ತೆಗೆ ಅಡ್ಡ ಬಿದ್ದು ಸಾರಿಗೆ ಅಡಚಣೆ ಉಂಟಾಯಿತು. ಮರದಡಿಯಲ್ಲಿದ್ದ ಕಾರು ನಜ್ಜುಗುಜ್ಜಾಗಿದೆ. ಉಮಾನರ್ಸಿಂಗ್ ಹೋಮ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ತೇಗಿನ ಮರ ಬಿದ್ದು ರಾ.ಹೆದ್ದಾರಿಯಲ್ಲಿ ಸುಮಾರು ಒಂದು ತಾಸು ಸಾರಿಗೆ ಅಡಚಣೆ ಉಂಟಾಯಿತು. ಕರಂದಕ್ಕಾಡ್ ಜಂಕ್ಷನ್‌ನಲ್ಲಿ ಮರ ರಸ್ತೆಗೆ ಅಡ್ಡ ಬಿದ್ದಿದೆ.
ವರ್ಕಾಡಿ, ಮೀಂಜ ಪಂಚಾಯತ್‌ನ ಹಲವೆಡೆಗಳಲ್ಲಿ ಮರ ಉರುಳಿ ವಿದ್ಯುತ್ ಕಂಬ ಧರಾಶಾಹಿಯಾಗಿದೆ. ಕುಂಜತ್ತೂರು ತೂಮಿನಾಡುನಲ್ಲಿ ವಿದ್ಯುತ್ ಕಂಬವೊಂದು ಆಟೋರಿಕ್ಷಾ ಮೇಲೆ ಬಿದ್ದು ಹಾನಿಗೀಡಾಗಿದೆ. ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ. ಇದರ ಸಮೀಪದ ಶ್ರೀ ಮಹಾಕಾಳಿ ಭಜನಾ ಮಂದಿರದ ದ್ವಾರದ ಬಳಿ ಮರವೊಂದು ರಸ್ತೆಗೆ ಅಡ್ಡ ಬಿದ್ದು ಸಾರಿಗೆ ತಡೆ ಉಂಟಾಯಿತು. ತೂಮಿನಾಡಿನ ಉದಯನಗರದ ಮಾಧವ, ಲಕ್ಷಿ$¾à ಅವರ ಮನೆ ಸಮೀಪ ಬೃಹತ್ ಹಲಸಿನ ಮರ ಮುರಿದು ಬಿದ್ದಿದೆ.
ವಾಹನ ಸಂಚಾರ ಮೊಟಕು
ಮುರತ್ತಣೆ ಗಾಂಧಿ ನಗರದಲ್ಲಿ ಅಕೇಶಿಯಾ ಮರ ರಸ್ತೆಗೆ ಬಿದ್ದು ಸಂಚಾರ ತಡೆ ಸೃಷ್ಟಿಯಾಯಿತು. ಸಮೀಪವೇ ಮರವೊಂದು ಎಚ್.ಟಿ. ಲೈನ್‌ಗೆ ಬಿದ್ದಿತು. ಈ ಕಾರಣದಿಂದ ಹೊಸಂಗಡಿಯಿಂದ ಆನೆಕಲ್ಲು ಭಾಗಕ್ಕೆ ತೆರಳುವ ಬಸ್ ಸಹಿತ ವಾಹನಗಳು ಪಾವೂರು ಕ್ರಾಸ್ ರಸ್ತೆಯಾಗಿ ಬೇಕರಿ ಜಂಕ್ಷನ್ ಮೂಲಕ ಸಂಚರಿಸಿತು.
Related Articles
Advertisement
ಕಡಂಬಾರ್ ಶಾಲಾ ಪರಿಸರದಲ್ಲಿ ಮರವೊಂದು ಉರುಳಿ ಬಿದ್ದು ಬೈಕ್ ಸವಾರ ಕಳಕಟ್ಟ ನಿವಾಸಿ ಬಾಲಕೃಷ್ಣ ಶೆಟ್ಟಿಗಾರ್(40) ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಕಡಂಬಾರು ಕಟ್ಟೆಯಲ್ಲಿ ಮರವೊಂದು ರಸ್ತೆಗೆ ಬಿದ್ದಿದೆ. ಉಪ್ಪಳ ರೈಲು ನಿಲ್ದಾಣ ರಸ್ತೆಯ ಪ್ರದೀಪ್ ಕುಮಾರ್ ಶೆಟ್ಟಿ ಅವರ ಕ್ವಾಟರ್ಸ್‌ಗೆ ತೆಂಗಿನ ಮರವೊಂದು ಮುರಿದು ಬಿದ್ದು ಹಾನಿಗೀಡಾಗಿದೆ. ಸೋಂಕಾಲ್‌ನ ಬಸ್ ತಂಗುದಾಣ ಪರಿಸರದಲ್ಲಿ ಮೇಫÉವರ್ ಮರವೊಂದು ಮುರಿದು ಬಿದ್ದಿದೆ. ಉಪ್ಪಳ ಶಾರದಾ ನಗರದಲ್ಲಿ ಬೃಹತ್ ಗಾಳಿ ಮರ ಬಿದ್ದು 9 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.
ಮಂಜೇಶ್ವರದಲ್ಲಿ ಕಡಲಬ್ಬರಬಿರುಸಿನ ಗಾಳಿ, ಮಳೆಗೆ ಮಂಜೇಶ್ವರ ಪ್ರದೇಶದಲ್ಲಿ ಸಮುದ್ರದಲ್ಲಿ ಅಬ್ಬರ ಕಂಡು ಬಂದಿದೆ. ಶನಿವಾರ ಬೆಳಗ್ಗೆ ಬೃಹತ್ ಗಾತ್ರದ ಅಲೆಗಳು ದಡಕ್ಕಪ್ಪಳಿಸಿದೆ. ಹೊಸಬೆಟ್ಟು ಕಡಪ್ಪುರ, ಕೀತೇìಶ್ವರ, ಕಣ್ವತೀರ್ಥ, ತಲಪಾಡಿ ಮೊದಲಾದೆಡೆ ಕಡಲಬ್ಬರ ಉಂಟಾಗಿದೆ. ರಸ್ತೆಗೆ ಕಲ್ಲು ಬಿದ್ದು ಸಂಚಾರ ಮೊಟಕು :ಪೆರ್ಲ-ಸ್ವರ್ಗ ರಸ್ತೆಯ ಗುಂಡ್ಯಡ್ಕದಲ್ಲಿ ಗುಡ್ಡೆಯಿಂದ ಭಾರೀ ಗಾತ್ರದ ಕಲ್ಲೊಂದು ರಸ್ತೆಗೆ ಬಿದ್ದಿದೆ. ಇದರಿಂದಾಗಿ ಕೆಲವು ಹೊತ್ತು ರಸ್ತೆ ತಡೆ ಉಂಟಾಯಿತು. ಎರಡು ಮನೆ ಕುಸಿತ
ಮುಳ್ಳೇರಿಯ ಮುಂಡೋಳು ಕರುಣನ್ ಅವರ ಮನೆ ಕುಸಿದು ಬಿದ್ದು ಅಪಾರ ಹಾನಿಯಾಗಿದೆ. ಮನೆಯ ಒಂದು ಭಾಗ ಮರ ಮುರಿಯುವ ರೀತಿಯ ಶಬ್ದ ಕೇಳಿ ಕರುಣನ್ ಮತ್ತು ಪತ್ನಿ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಕುಂಬಳೆ ಬಳಿ ಶಾಂತಿಪಳ್ಳದಲ್ಲಿ ಅಂಗನವಾಡಿ ಹಿಂಭಾಗದಲ್ಲಿರುವ ರಾಜೇಂದ್ರನ್ ಅವರ ಮನೆ ಕುಸಿದು ಬಿದ್ದಿದೆ. ಮಧೂರು ದೇವಸ್ಥಾನದ ಮುಂಭಾಗದಲ್ಲಿ ಮಧುವಾಹನಿ ಹೊಳೆ ತುಂಬಿ ಹರಿಯುತ್ತಿದೆ. ಕಂಟ್ರೋಲ್ ರೂಂ ಆರಂಭ: ಮುಂಗಾರು ಚುರುಕುಗೊಳ್ಳುತ್ತಿರುವಂತೆ ಉಂಟಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ನಿಯಂತ್ರಣ ಕೇಂದ್ರ ಆರಂಭಗೊಂಡಿತು. ಸಮುದ್ರ ಕರಾವಳಿ ಪ್ರದೇಶ, ಗುಡ್ಡಗಾಡು ಪ್ರದೇಶ ಗಳಲ್ಲಿ ಭೂಕುಸಿತ, ಸಮುದ್ರ ತೆರೆಗಳ ಅಪ್ಪಳಿಸುವಿಕೆ, ಕಡಲುಕೊರೆತ, ಅಂಟು ಜಾಡ್ಯಗಳ ನಿರ್ವಹಣೆ ಮೊದಲಾದ ಪ್ರಕೃತಿ ಕ್ಷೊàಭೆಗಳಲ್ಲಿ ಪರಿಹಾರ ಏರ್ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾ ಲಯ ಮತ್ತು ತಾಲೂಕು ಕೇಂದ್ರಗಳಲ್ಲಿ ಶುಕ್ರವಾರದಿಂದ ನಿಯಂತ್ರಣ ಕೇಂದ್ರ ಚಾಲನೆಗೆ ಬಂದಿದೆ. ನೆರವಿಗಾಗಿ ಕರೆ ಮಾಡಿ
ಅಗತ್ಯವಿರುವವರು ಜಿಲ್ಲಾಧಿಕಾರಿಗಳ ಕಚೇರಿ 04994-257700, ಮೊಬೈಲ್ ವಾಟ್ಸಫ್‌ನಲ್ಲಿ 9446601700, ಟೋಲ್ ಪ್ರೀ ಸಂಖ್ಯೆ 1077, ಮತ್ತು ಕಾಸರಗೋಡು ತಾಲೂಕು ಕಚೇರಿ 04994-230021, ಮಂಜೇಶ್ವರ ತಾಲೂಕು ಕಚೇರಿ 04998-244044, ಹೊಸದುರ್ಗ ತಾಲೂಕು ಕಚೇರಿ 04672-204042, ವೆಳ್ಳೆರಿಕುಂಡು ತಾಲೂಕು ಕಚೇರಿ 04672-242320 ಸಂಖ್ಯೆಗಳಿಗೆ ಕರೆಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದೆಂದು ಜಿಲ್ಲಾಧಿಕಾರಿಗಳ ಪ್ರಕಟನೆ ಯಲ್ಲಿ ತಿಳಿಸಲಾಗಿದೆ.