Advertisement

ಎಸ್‌ಸಿಡಿಸಿಸಿ ಬ್ಯಾಂಕಿನಿಂದ ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ 

07:50 AM Aug 06, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕಳೆದ ಹಲವು ವರ್ಷಗಳಿಂದ ತನ್ನ ಲಾಭದ ಒಂದಂಶವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆಪ್ರೋತ್ಸಾಹ ನೀಡುವುದಕ್ಕಾಗಿ ವಿನಿಯೋಗಿಸುತ್ತಿದೆ. ಪ್ರೋತ್ಸಾಹ ಧನ ಪಡೆದ ವಿದ್ಯಾರ್ಥಿಗಳು ಮುಂದೆ ದುಡಿಯುವ ಸಂದರ್ಭ ಒಂದಷ್ಟು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದಾಗ ಬ್ಯಾಂಕಿನ ಶ್ರಮ ಸಾರ್ಥಕ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ಹೇಳಿದರು.

Advertisement

ಅವರು ಶನಿವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ವತಿಯಿಂದ ಆಯೋಜಿಸಿದ್ದ ಸಹಕಾರಿ ಪಿತಾಮಹ ದಿ| ಮೊಳಹಳ್ಳಿಶಿವರಾವ್‌ ಸ್ಮರಣಾರ್ಥ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಕರು ವಿದ್ಯಾರ್ಥಿಗಳ ಪ್ರತಿಭೆ ಯನ್ನು ಗುರುತಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡಿದಾಗ ಉನ್ನತ ಸಾಧನೆ ಸಾಧ್ಯ. ವಿದ್ಯೆಯಾರೂ ಕಸಿಯಲಾಗದ ಸಂಪತ್ತಾ ಗಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್‌ ಶಿಕ್ಷಣಕ್ಕೆ ನಿರಂತರ ಸಹಕಾರ ನೀಡುತ್ತಿದೆ. ಜತೆಗೆ ಇತರ ಸಾಮಾಜಿಕ ಕ್ಷೇತ್ರಗಳಿಗೂ ಪ್ರೋತ್ಸಾಹ ನೀಡುತ್ತಿದೆ ಎಂದರು.

ಸಂಶೋಧನಾತ್ಮಕ ಶಿಕ್ಷಣ ಅಗತ್ಯ
ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಕೊಳಂಬೆ ಪನಾ ಪ.ಪೂ. ಕಾಲೇಜಿನ ಚೇರ್‌ಮನ್‌ ಡಾ| ಪ್ರಸಾದ್‌ ಹೆಗ್ಡೆಮಾತನಾಡಿ, ಜಗತ್ತಿನ 200 ಟಾಪ್‌ ವಿ.ವಿ.ಗಳಲ್ಲಿ ಭಾರತದ ಯಾವುದೇ ವಿ.ವಿ. ಸ್ಥಾನ ಪಡೆದಿಲ್ಲವಾಗಿದ್ದು, ದೇಶದ ಶಿಕ್ಷಣ ಕ್ಷೇತ್ರ ಇನ್ನಷ್ಟು ಸಾಧಿಸಬೇಕಿರುವುದು ಅನಿವಾರ್ಯ ವಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಂಶೋಧನಾತ್ಮಕ ಶಿಕ್ಷಣವನ್ನೂ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ 2016-17ನೇ ಸಾಲಿನ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ
ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು. ಬ್ಯಾಂಕಿನ ಸಿಬಂದಿಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಜತೆಗೆ ವಿಮಾ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದ ಸಿಬಂದಿಯನ್ನು ಗೌರವಿಸಲಾಯಿತು.

Advertisement

ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್ಯ, ನಿರ್ದೇಶಕರಾದ   ವಿನಯ್‌ ಕುಮಾರ್‌ ಸೂರಿಂಜೆ, ಬಿ. ನಿರಂಜನ್‌, ಭಾಸ್ಕರ್‌ ಎಸ್‌.ಕೋಟ್ಯಾನ್‌, ಬಿ. ರಘುರಾಮ್‌ ಶೆಟ್ಟಿ, ಎಂ. ವಾದಿರಾಜ ಶೆಟ್ಟಿ, ಸದಾಶಿವ ಉಳ್ಳಾಲ, ಎಸ್‌. ರಾಜುಪೂಜಾರಿ, ಶಶಿಕುಮಾರ್‌ ರೈ ಬಿ, ಎಸ್‌.ಬಿ.ಜಯರಾಮ ರೈ, ಬೆಳಪು ದೇವಿಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ಬ್ಯಾಂಕ್‌ ನಿರ್ದೇಶಕ ಕೆ.ಎಸ್‌. ದೇವರಾಜ್‌ ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್‌ ಎಸ್‌. ವಂದಿಸಿದರು. ಗೋಪಿನಾಥ್‌ ಭಟ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next