Advertisement

“ಸತತ ಅಭ್ಯಾಸ ಪರಿಪೂರ್ಣತೆಗೆ ಮೂಲ’

10:13 PM May 06, 2019 | Team Udayavani |

ದರ್ಬೆ: ಸತತ ಅಭ್ಯಾಸವೇ ಪರಿಪೂರ್ಣತೆಗೆ ಮೂಲಮಂತ್ರ. ಶಿಕ್ಷಕನಾದವನು ತನ್ನ ಪರಿಣಾಮಕಾರಿ ಅಧ್ಯಾಪನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಉಳ್ಳವನಾಗಿರಬೇಕು ಎಂದು ಸಂತ ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು.

Advertisement

ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಎರಡು ವರ್ಷಗಳ ಎಂಎಸ್ಸಿ ಅಧ್ಯಯನ ಮುಗಿಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿದಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರ್ಕ, ಸಂಗೀತ, ವ್ಯಾಕರಣ ಮತ್ತು ಗಣಿತಶಾಸ್ತ್ರ ವಿಷಯಗಳು ಪರಸ್ಪರ ಅನ್ಯೋನ್ಯವಾಗಿವೆ. ಒಬ್ಬ ಉತ್ತಮ ಶಿಕ್ಷಕನೆನಿಸಿಕೊಳ್ಳಬೇಕಾದರೆ ವ್ಯಾಕರಣಬದ್ಧ ಭಾಷಾ ಪಾಂಡಿತ್ಯವೂ ಬಹಳ ಅಗತ್ಯ. ಜ್ಞಾನ ಸಂಪತ್ತಿನೊಂದಿಗೆ ಹೃದಯ ಶ್ರೀಮಂತಿಕೆಯೂ ಮೇಳೈಸಿದಾಗ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು.

ಸಿಂಹಾವಲೋಕನ ಅಗತ್ಯ
ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೈಷ್ಣವಿ ಸಿ. ಮಾತನಾಡಿ, ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸಿಂಹಾವಲೋಕನ ಮಾಡುವುದು ಬಹಳ ಮುಖ್ಯ. ನಾವು ಕೈಗೊಳ್ಳುವ ಯೋಜನೆಗಳು ವ್ಯಕ್ತಿಗತ ಪ್ರಗತಿ, ಸಂಸ್ಥೆಯ ಏಳಿಗೆಗೆ ಪೂರಕವಾಗಿ ಸ್ಪಂದಿಸುವಂತಿರಬೇಕು ಎಂದರು.

ಸಹಾಯಕ ಪ್ರಾಧ್ಯಾಪಕಿ ಅನುಷಾ ಎಲ್‌., ಕಾರ್ತಿಕ್‌ ಕೆ., ಮೋಹನ್‌ರಾಜ್‌ ಎಸ್‌. ಮತ್ತು ವೃಕ್ಷವರ್ಧನ ಹೆಬ್ಟಾರ್‌ ಎನ್‌. ಉಪಸ್ಥಿತರಿದ್ದರು. ವಿಭಾಗವು ಹಮ್ಮಿಕೊಂಡ ಸರ್ಟಿಫಿಕೇಟ್‌ ಕೋರ್ಸನ್ನು ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಚೈತ್ರಾ, ದೀಪಶ್ರೀ ಮತ್ತು ಪಲ್ಲವಿ ಅನಿಸಿಕೆ ವ್ಯಕ್ತಪಡಿಸಿದರು.

Advertisement

ಲವಿಟ ರಮ್ಯಾ ಡಿ’ಸೋಜಾ ಸ್ವಾಗತಿಸಿ, ಪೂಜಾ ಕೆ. ವಂದಿಸಿದರು. ಶ್ರುತಿ ಯು. ಕಾರ್ಯಕ್ರಮ ನಿರ್ವಹಿಸಿದರು.

ಮೌಲ್ಯ ಬೆಳೆಸಿಕೊಳ್ಳಿ
ವಿಭಾಗ ಸಂಯೋಜಕ ಪ್ರೊ| ಗಣೇಶ್‌ ಭಟ್‌ ಮಾತನಾಡಿ, ಉತ್ತಮ ಪ್ರಶಸ್ತಿ ಪತ್ರಗಳು ಮತ್ತು ಅಂಕ ಪಟ್ಟಿಗಳ ಗಳಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಮಾನವರಾಗಲು ಸದಾ ಪ್ರಯತ್ನಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next