ಮಹದೇವಪುರ: ಅನ್ಯ ಭಾಷಿಕರು ವಾಸವಿರುವ ಪ್ರದೇಶಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲುವ ಅಗತ್ಯವಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಂತರಾಮಯ್ಯ ಅಭಿಪ್ರಾಯಪಟ್ಟರು, ಉತ್ತರ ಕರ್ನಾಟಕ ಯುವಕರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹೂಡಿಯಿಂದ ಗರುಡಾಚಾರ್ ಪಾಳ್ಯದವರೆಗೆ ಹಮ್ಮಿಕೊಂಡಿದ್ದ ಕನ್ನಡ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದಲ್ಲಿ ದೇಶದ ವಿವಿಧ ರಾಜ್ಯಗಳ ಜನರು ವಾಸಿಸುತ್ತಿದ್ದಾರೆ. ಇವರಿಗೆಲ್ಲಾ ಕನ್ನಡ ಕಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಹೇಳಿದರು.
ನೆಲ, ಜಲ, ಭಾಷೆ ವಿಚಾರದಲ್ಲಿ ಕರ್ನಾಟಕದ ಜನತೆ ಒಗ್ಗಟ್ಟಾಗಿರಬೇಕು. ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯಾದರೆ ಎಲ್ಲರೂ ಒಂದೇ ಧ್ವನಿಯಾಗಿ ಹೋರಾಡಬೇಕು ಎಂದರು. ಹೂಡಿಯ ಸ್ವಾಮಿ ವಿವೇಕಾನಂದ ಆಶ್ರಮದಿಂದ ಹೊರಟು, ಗರುಡಾಚಾರ್ ಪಾಳ್ಯದ ಮುಖ್ಯ ರಸ್ತೆಗಳಲ್ಲಿ ಸಾಗಿದ
ಜಾಥಾದಲ್ಲಿ ಸಾವಿರಾರು ಯುವಕರು ಭಾಗವಹಿಸಿದರು.
ಸಂಘದ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ, ಅಧ್ಯಕ್ಷ ಅನಿಲ್ ಅಕಿವಾಟ, ಪ್ರಧಾನ ಕಾರ್ಯದರ್ಶಿ ಪಂಚಯ್ಯ ವಿ. ಹಿರೇಮಠ್…, ಉಪಾಧ್ಯಕ್ಷ ಅಶೋಕ್ ಕಂಬಳಿ, ಮುಖಂಡರಾದ ಕಬಡ್ಡಿ ಪಿಳ್ಳಪ್ಪ, ಬಿ.ಎಂ.ಪ್ರಕಾಶ್, ಅಶ್ವತ್ಥನಾರಾಯಣ ರಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.