Advertisement

ನಿರಂತರ ವಿಮಾನ ಹಾರಾಟ: ಕ್ರಮ ಕೈಗೊಳ್ಳಲು ಮನವಿ

12:29 PM Jan 07, 2022 | Team Udayavani |

ಬೀದರ: ಬೀದರ ನಿಲ್ದಾಣದಿಂದ ನಿರಂತರ ನಾಗರಿಕ ವಿಮಾನ ಹಾರಾಟಕ್ಕೆ ಕ್ರಮ ವಹಿಸಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

Advertisement

ಹೋರಾಟಗಾರ ವಿರೂಪಾಕ್ಷ ಗಾದಗಿ ಅವರ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪ್ರಮುಖರು ನಗರದಲ್ಲಿ ಗುರುವಾರ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಬೀದರನಲ್ಲಿ ನಾಗರಿಕ ವಿಮಾನ ನಿಲ್ದಾಣ ಕೇವಲ ನಾಮ ಕೇ ವಾಸ್ತೆ ಎಂಬಂತಾಗಿದೆ. ಜಿಲ್ಲೆಯ ಜನತೆ ದೂರದ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸಲು ಯಾವುದೇ ವಿಮಾನ ಹಾರಾಟ ಇಲ್ಲವಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಈ ಹಿಂದೆ ಟ್ರೂಜೆಟ್‌ ಸಂಸ್ಥೆಯವರು ಕೆಲವು ತಿಂಗಳ ಮಟ್ಟಿಗೆ ವಿಮಾನ ಹಾರಿಸಿ ನಂತರ ಯಾವುದೇ ವಿಮಾನಗಳ ಹಾರಾಟ ನಡೆಸುತ್ತಿಲ್ಲ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಎರಡು ವಿಮಾನ ಸಂಸ್ಥೆಗಳು ದಿನಾಲೂ ಎರಡು ವಿಮಾನಗಳನ್ನು ಬೆಂಗಳೂರು ಹಾಗೂ ಇನ್ನಿತರ ನಗರಗಳಿಗೆ ಹಾರಾಟ ನಡೆಸುತ್ತಿವೆ. ನಮ್ಮ ಜಿಲ್ಲೆಯಲ್ಲಿ ವಿಮಾನ ಹಾರಾಟ ನಡೆಸಲು ಎಲ್ಲಾ ಸೌಲಭ್ಯವಿದ್ದರೂ, ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಇಲ್ಲಿ ವಿಮಾನ ಹಾರಾಟ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಿಂದ ಸಂಸದರಾಗಿ ಈಗ ಪ್ರಭಾವಿ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದು, ಇಂಥ ಸಂದರ್ಭದಲ್ಲಿಯೂ ಇಲ್ಲಿಂದ ವಿಮಾನ ಹಾರಾಟ ಆಗದಿದ್ದರೇ ಇದು ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಕೂಡಲೇ ವಿಮಾನ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಪ್ರಮುಖರಾದ ಪೀಟರ್‌ ಚಿಡಗುಪ್ಪ, ಪ್ರಶಾಂತ ಭಾವಿಕಟ್ಟಿ, ಕೆ.ವಿ ಮೋಹನ ಕುಮಾರ್‌, ಆಕಾಶ, ಮಹೇಶ, ಸ್ವಾಮಿದಾಸ ಚಿಟ್ಟಾಕರ್‌, ಸ್ವಾಮಿದಾಸ್‌ ಸಾರಳಿಕರ್‌, ದುರ್ಗೇಶ, ತುಳಸಿರಾಮ, ಬಾಬು, ಸುರೇಶ, ಅಪ್ಪು ಮೈಲೂರ್‌ ಮತ್ತು ಕಾರ್ತಿಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next