Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವೋಟಿಗಾಗಿ ಅಲ್ಪಸಂಖ್ಯಾಕರನ್ನು ಓಲೈಸುವ ಕೆಲಸ ಮಾಡಿದ್ದಾರೆ. ಈಗ ಹೊಂದಾಣಿಕೆಗಾಗಿ ರಾಜ್ಯಕ್ಕೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು.
Related Articles
Advertisement
ನಮಗೇ ನೀರಿಲ್ಲ, ತ.ನಾಡಿಗೆ ಎಲ್ಲಿಂದ ಬಿಡೋಣ?: ಡಿಕೆಶಿಮಂಡ್ಯ,: ನಮಗೇ ಕುಡಿಯಲು ನೀರಿಲ್ಲ. ತಮಿಳುನಾಡಿಗೆ ಯಾಕೆ ನೀರು ಬಿಡಬೇಕು. ಬಿಜೆಪಿಯವರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಶಿವನಸಮುದ್ರ ಡ್ಯಾಂನಲ್ಲಿ ನೀರೆತ್ತಲು ಕೆಆರ್‌ಎಸ್‌ನಿಂದ ನೀರು ಹರಿಸಲಾಗಿದೆ. ನಮ್ಮ ರೈತರಿಗೇ ನೀರು ಕೊಡಲು ಆಗುತ್ತಿಲ್ಲ. ಇನ್ನು ತಮಿಳುನಾಡಿಗೆ ನೀರು ಕೊಡೋದು ಎಲ್ಲಿಂದ ಎಂದು ಮರು ಪ್ರಶ್ನಿಸಿದರು. ತೆಲಂಗಾಣದವರು ನೀರಿಗಾಗಿ ಮನವಿ ಮಾಡುತ್ತಿದ್ದಾರೆ. ನಾವು ನಿಮಗೆ ಕೊಡುತ್ತೇವೆ. ನೀವು ನಮಗೆ ಕೊಡಿ ಅಂತಿದ್ದಾರೆ. ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಬಿಜೆಪಿಯವರು ಮೊದಲು ಮೇಕೆದಾಟು ಯೋಜನೆ ಜಾರಿಗೆ ಅನುಮತಿ ಕೊಡಿಸಲಿ. ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿ ಮಾಡುತ್ತಿದೆ. ನಮ್ಮನ್ನು ದಡ್ಡರು ಎಂದುಕೊಂಡಿದ್ದಾರಾ? ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಸ್ಪಷ್ಟಪಡಿಸಿದರು. ಖಾಲಿ ಕೊಡ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ
ಬೆಂಗಳೂರು: ಬರಗಾಲದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸ ಲಾಗುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರವಿವಾರ ಮೆಜೆಸ್ಟಿಕ್‌ನಲ್ಲಿ ಖಾಲಿ ಕೊಡ ಪ್ರದರ್ಶಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭೀಕರ ಬರಗಾಲದ ಹಿನ್ನೆಲೆಯಲ್ಲಿ ನೀರಿಲ್ಲದೆ ಬೆಂಗಳೂರು ಸಹಿತ ಸುತ್ತಮುತ್ತಲಿನ ಜನರು ತೊಂದರೆಯಲ್ಲಿ ದ್ದಾರೆ. ಕುಡಿಯುವ ನೀರಿನ ಬವಣೆ ಶುರುವಾಗಿದೆ. ಇಂತಹ ಕಷ್ಟದಲ್ಲಿ ಸರಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದರಲ್ಲಿ ಅರ್ಥವಿಲ್ಲ. ಕನ್ನಡಿಗರ ಹಿತಕಾಯುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು. ಏನಿಲ್ಲ… ಏನಿಲ್ಲ… ಕುಡಿಯಲು ನಮಗೆ ನೀರಿಲ್ಲ
ಮಂಡ್ಯ: “ಏನಿಲ್ಲ… ಏನಿಲ್ಲ… ಕುಡಿಯಲು ನಮಗೆ ನೀರಿಲ್ಲ. ನಮ್ಮ, ನಿಮ್ಮ ಮನೆಯಲ್ಲಿ ನೀರಿಲ್ಲ. ಕನ್ನಂಬಾಡಿ ಖಾಲಿ ಮಾಡಿ ತಮಿಳುನಾಡಿಗೆ ನೀರು ಬಿಟ್ರಲ್ಲ… ‘ ಇದು ಮಂಡ್ಯ ನಗರ ಬಿಜೆಪಿ ಕಾರ್ಯಕರ್ತರು ಕೆಆರ್‌ಎಸ್‌ನಿಂದ ಕಾವೇರಿ ನದಿಗೆ ನೀರು ಬಿಟ್ಟಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೀತಿ. ಸುಭಾಷ್ ನಗರ ಬಿಜೆಪಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೈಯಲ್ಲಿ ಖಾಲಿ ಬಿಂದಿಗೆ ಹಾಗೂ ನೀರಿನ ಕ್ಯಾನ್‌ಗಳನ್ನು ಹಿಡಿದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತ, ಕರಿಮಣಿ ಮಾಲೀಕ ಹಾಡಿಗೆ ವ್ಯಂಗ್ಯದ ಸಾಹಿತ್ಯದ ಸಾಲು ಸೇರಿಸಿ ಹಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರನ್ನು ವಿನೋಬಾ ರಸ್ತೆಗೆ ಬರುತ್ತಿದ್ದಂತೆ ಪೊಲೀಸರು ಪಕ್ಷದ ಜಿಲ್ಲಾಧ್ಯಕ್ಷ ಡಾ| ಇಂದ್ರೇಶ್, ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ ಸಹಿತ ಹಲವರನ್ನು ವಶಕ್ಕೆ ಪಡೆದರು.