Advertisement

ಪುಷ್ಕರಿಣಿ ಸ್ವಚ್ಛತೆಗೆ ನಿರಂತರ ಕರಸೇವೆ

10:49 PM May 29, 2019 | sudhir |

ಕೋಟ: ಇಲ್ಲಿನ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯಲ್ಲಿ ಹೂಳು ತುಂಬಿ ನೀರು ಕಲುಷಿತಗೊಂಡಿದ್ದು ಇದನ್ನು ಸ್ವಚ್ಛಗೊಳಿಸುವ ಸಲುವಾಗಿ ಸ್ಥಳೀಯ ಕರಸೇವಕರು ಮೇ 26ರಂದು ಶ್ರಮದಾನದ ಕೆಲಸ ಆರಂಭಿಸಿದ್ದರು. ಆದರೆ ಹೂಳು ಹೇರಳ ಪ್ರಮಾಣದಲ್ಲಿರುವುದರಿಂದ ಶ್ರಮದಾನ ನಿರಂತರ 4ನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿ ದಿನ ಸಂಜೆ 5.30ರಿಂದ ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ರಾತ್ರಿ 10ರ ತನಕ ನಡೆಯುತ್ತಿದೆ.

Advertisement

ಸ್ಥಳೀಯ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್‌ ಭಟ್ ಮುಂತಾದವರು ನೇತೃತ್ವ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next