Advertisement

ನಗರದಲ್ಲಿ ಶನಿವಾರವೂ ಮುಂದುವರಿದ ಮಳೆ

11:04 AM Oct 08, 2017 | Team Udayavani |

ಬೆಂಗಳೂರು: ನಗರದಲ್ಲಿ ಶನಿವಾರ ಕೂಡ ಮುಂದುವರಿದ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಕೆಲ ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸವಾರರು ತೊಂದರೆ ಅನುಭವಿಸಿದರು.

Advertisement

ಮಧ್ಯಾಹ್ನದಿಂದ ಸಂಜೆಯವರೆಗೆ ಮಳೆ ಸುರಿದ ಪರಿಣಾಮ ಶಾಲಾ-ಕಾಲೇಜು ಹಾಗೂ ಕಚೇರಿಗಳಿಂದ ಮನೆ ತೆರಲುವವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದರು. ಹೆಬ್ಟಾಳ, ಶಾಂತಿನಗರ, ಗಾಂಧಿನಗರ, ಆನಂದರಾವ್‌ ವೃತ್ತ, ರೇಸ್‌ಕೋರ್ಸ್‌ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿತ್ತು. ಮೆಜೆಸ್ಟಿಕ್‌ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಿಂದ ಪ್ರಯಾಣಿಕರು ಪರದಾಡಿದ ದೃಶ್ಯ ಕಂಡುಬಂತು. 

ಶನಿವಾರ ಮಳೆ ಜೋರಾಗಿದ್ದರೂ ಗಾಳಿಯ ವೇಗ ಕಡಿಮೆಯಿದ್ದರಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದೆರಡು ಭಾಗಗಳಲ್ಲಿ ಮರದ ಕೊಂಬೆಗಳು ಮರಿದಿರುವುದು ಹೊರತುಪಡಿಸಿ ಯಾವುದೇ ಭಾಗಗಳಲ್ಲಿ ಮರ ಬಿದ್ದಿರುವುದು ವರದಿಯಾಗಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next