Advertisement

ಮುಂದುವರಿದ ವರ್ಷಧಾರೆ: ಕೃಷಿ ಚುರುಕು

03:15 PM Jul 12, 2018 | Team Udayavani |

ಚಿಕ್ಕಬಳ್ಳಾಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿ ದಿದ್ದು, ಕೃಷಿ ಚಟುವಟಿಕೆಗಳು ಜಿಲ್ಲಾದ್ಯಂತ ಚುರುಕಗೊಂಡಿವೆ. ಕಳೆದ ಮೇ ತಿಂಗಳಲ್ಲಿ ಕಾಣಿಸಿಕೊಂಡಿದ್ದ ಮಳೆ ಜೂನ್‌ ತಿಂಗಳ ಪೂರ್ತಿ ಕಾಣಸಿಕೊಳ್ಳದೇ ರೈತರು ತೀವ್ರ ಕಂಗಾಲಾಗಿದ್ದರು. ಅದರಲ್ಲೂ ಬಿತ್ತನೆ ಸಮಯಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಈ
ಬಾರಿ ಬರ ಆವರಿಸುವ ಆತಂಕದಲ್ಲಿ ಅನ್ನದಾತರು ಇದ್ದರು.

Advertisement

ಕಳೆದ ಮಂಗಳವಾರದಿಂದ ಜಿಲ್ಲೆಯಲ್ಲಿ ಮಳೆರಾಯನ ಕೃಪೆ ಮುಂದುವರಿದಿದ್ದು, ಅನ್ನದಾತದಲ್ಲಿ ಸಂತಸ ತಂದಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಬಿತ್ತನೆ ಪ್ರಮಾಣ ಭಾರೀ ಕುಸಿತಗೊಂಡು ಕೃಷಿ ಇಲಾಖೆ  ಆತಂಕಕ್ಕೀಡಾಗಿತ್ತು. ಅದರಲ್ಲೂ ರೈತರು ಬಿತ್ತನೆಗೆ ಸಜ್ಜಾಗಿ ಮಳೆಗಾಗಿ ಎದುರು ನೋಡುತ್ತಿದ್ದರು. ಸದ್ಯ ರಾಜ್ಯ ದಲ್ಲಿ 48 ಗಂಟೆಗಳ ಉತ್ತಮ ಮಳೆಯಾಗುವ ಮುನ್ಸೂಚನೆ ಈಗಾಗಲೇ ಹವಾಮಾನ ಇಲಾಖೆ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಬುಧವಾರವು ಸಹ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕುಗಳಲ್ಲಿ ಮಳೆ ಬಿದ್ದಿದೆ.

ಬಿತ್ತನೆಗೆ ತೇವಾಂಶ ಅಡ್ಡಿ: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಳದಿಂದ ಬಿತ್ತನೆ
ಕಾರ್ಯಕ್ಕೂ ತೀವ್ರ ಹಿನ್ನಡೆಯಾಗಿದೆ. ಭೂಮಿಯಲ್ಲಿ ತೇವಾಂಶ ಇದ್ದಾಗ ಬಿತ್ತನೆ ಮಾಡಿದರೆ ಬಿತ್ತನೆ ಬೀಜದ ಮೊಳಕೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ಮಳೆಯಾಗುತ್ತಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಜು.10ರ ಅಂತ್ಯಕ್ಕೆ ಶೇ. 13 ಬಿತ್ತನೆ ಕಾರ್ಯಮುಗಿದಿದ್ದು, ಗುರಿ ಹೊಂದಿರುವ 1.54 ಲಕ್ಷ ಹೆಕ್ಟೇರ್‌ ಪೈಕಿ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ.
 
8.3 ಮಿ.ಮೀ. ಮಳೆ ದಾಖಲು: ಜಿಲ್ಲೆಯಲ್ಲಿ ಕಳೆದ ಮಂಗಳವಾರ ಉತ್ತಮ ಮಳೆಯಾಗಿದ್ದು. 8.3 ಮಿ.ಮೀ. ಮಳೆ
ಜಿಲ್ಲೆಯಲ್ಲಿ ದಾಖಲಾಗಿದೆ. ಆ ಪೈಕಿ ಬಾಗೇಪಲ್ಲಿಯಲ್ಲಿ 3.3 ಮಿ.ಮೀ., ಚಿಕ್ಕಬಳ್ಳಾಪುರದಲ್ಲಿ 14.0 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 9.5 ಮಿ. ಮೀ., ಗೌರಿಬಿದನೂರು ತಾಲೂಕಿನಲ್ಲಿ 7.6 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 2.7 ಮಿ.ಮೀ., ಶಿಡ್ಲಘಟ್ಟ ತಾಲೂಕಿನಲ್ಲಿ 11.0 ಮಿ.ಮೀ. ಮಳೆ ಸೇರಿ ಒಟ್ಟು ಜಿಲ್ಲೆಯಲ್ಲಿ ಸರಾಸರಿ 8.3 ಮಿ.ಮೀ. ಮಳೆ ಆಗಿದೆಯೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ್‌ ಬುಧವಾರ ಉದಯವಾಣಿಗೆ ತಿಳಿಸಿದರು.

ಜುಲೈ 11 ರ ಅಂತ್ಯಕ್ಕೆ 19.1 ಮಿ.ಮೀ. ಮಳೆ: ಜಿಲ್ಲೆಯಲ್ಲಿ ಕಳೆದ ಜುಲೈ 1 ರಿಂದ 11 ರ ಅಂತ್ಯಕ್ಕೆ ಒಟ್ಟು 19.1 ಮಿ.ಮೀ. ಮಳೆ ದಾಖಲುಗೊಂಡಿದೆ. ಈ ಪೈಕಿ ಬಾಗೇಪಲ್ಲಿಯಲ್ಲಿ 20.8 ಮಿ.ಮೀ.. ಚಿಕ್ಕಬಳ್ಳಾಪುರದಲ್ಲಿ 23.0 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 18.2 ಮಿ. ಮೀ., ಗೌರಿಬಿದನೂರು ತಾಲೂಕಿನಲ್ಲಿ 15.9 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 13.0 ಮಿ.ಮೀ., ಶಿಡ್ಲಘಟ್ಟ ತಾಲೂಕಿನಲ್ಲಿ 20.8 ಮಿ.ಮೀ. ಮಳೆ ಸೇರಿ ಒಟ್ಟು ಜಿಲ್ಲೆಯಲ್ಲಿ ಜು.11 ರ ಅಂತ್ಯಕ್ಕೆ 19.1 ಮಿ.ಮೀ. ಮಳೆ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next