Advertisement

ಬೆಂಬಲಿಗರಿಂದ ಮುಂದುವರಿದ ಹೋರಾಟ

11:52 AM Jun 08, 2018 | |

ವಿಜಯಪುರ: ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್‌ ಹೈಕಮಾಂಡ್‌ ಕ್ರಮ ವಿರೋಧಿಸಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.

Advertisement

ನಗರದಲ್ಲಿ ಬಬಲೇಶ್ವರದಲ್ಲಿ ಪಾಟೀಲ ಬೆಂಬಲಿಗರು ಸರದಿ ಉಪವಾಸ ಆರಂಭಿಸಿದ್ದಾರೆ. ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್‌ ಬಳಿ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದಕ್ಕೂ ಮೊದಲು ವಿಜಯಪುರ-ಜಮಖಂಡಿ ಹೆದ್ದಾರಿ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಬಬಲೇಶ್ವರ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಕಾಂಗ್ರೆಸ್‌ ಪಕ್ಷ ಕಟ್ಟುವುದಕ್ಕಾಗಿ ಹಗಲಿರುಳು ಶ್ರಮಿಸಿದ ಎಂ.ಬಿ. ಪಾಟೀಲ ಅವರು, ರಾಜ್ಯವನ್ನು ಸಮಗ್ರ ನೀರಾವರಿ ಸೌಲಭ್ಯಕ್ಕಾಗಿ ಕರ್ನಾಟಕ ಪೂರ್ತಿ ಸುತ್ತಿ, ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಅದೇ ಕಾರಣಕ್ಕೆ ಅವರು ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಆದರೂ ಅವರ ರಾಜಕೀಯ ಏಳ್ಗೆ ಸಹಿಸದೇ ಕುತಂತ್ರ ಮಾಡಿ, ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಕಿಡಿ ಕಾರಿದರು.

ಎಂ.ಬಿ. ಪಾಟೀಲ ಅವರು ಪ್ರಾಮಾಣಿಕತೆಯಿಂದ ಅನುಷ್ಠಾನಕ್ಕೆ ತಂದಿರುವ ನೀರಾವರಿ ಯೋಜನೆಗಳು ಇಡಿ ದೇಶಕ್ಕೆ ಮಾದರಿಯಾಗಿವೆ. ಇಂಥ ಯೋಜನೆಗಳ ಪೂರ್ಣಗೊಳಿಸಲು ಎಂ.ಬಿ. ಪಾಟೀಲ ಅವರಿಗೆ ಮತ್ತೆ ಜಲ ಸಂಪನ್ಮೂಲ ಖಾತೆ ಸಹಿತ ಸಂಪುಟದಲ್ಲಿ ಅವಕಾಶ ನೀಡುವುದು ಅನಿವಾರ್ಯವಾಗಿತ್ತು. ಆದರೆ ಅವರಿಗೆ ಅವಕಾಶ ನೀಡದ ಕಾರಣ ಬಹುತೇಕ ನೀರಾವರಿ ಮಹತ್ವಾಕಾಂಕ್ಷೆ ಯೋಜನೆಗಳು ಪೂರ್ಣವಾಗಿ ಅನುಷ್ಠಾನಗೊಳ್ಳದೇ, ಭವಿಷ್ಯದಲ್ಲಿ ಅವಶೇಷಗಳಂತೆ ಕಾಣುವುದು ಖಚಿತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಾನಂದ ಆಲಗೊಂಡ, ಮಲ್ಲು ಮರ್ಯಾಣಿ, ಮುದಕಪ್ಪ ಕೊಟ್ಯಾಳ, ವಿಠuಲ ಶೀರೋಳ, ಭೀಮಶಿ ಕನ್ನೂರ, ಜಗದೀಶ ಕನ್ನೂರ, ರಾಜಗುರು ಉಳ್ಳಾಗಡ್ಡಿ, ಶ್ರೀಕಾಂತ ಪಡಗಾರ, ರಾಜಕುಮಾರ ಇಮ್ಮನದ, ಗುರಪ್ಪ ಕೊಲ್ಹಾರ, ಸಂಗಮೇಶ ಕೋಲಕಾರ, ದೇವರಾಜ ಬಿರಾದಾರ, ನಾಗು ಆರ್‌ ಹೋಳೆಪ್ಪಗೋಳ (ಹಲಗಣಿ), ಮಾಳು ಹಾವಡಿ, ಕಾಂತು ಚಿಕ್ಕಲಕಿ ಇತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Advertisement

ಮತ್ತೂಂದೆಡೆ ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆ ಮುಖ್ಯದ್ವಾರದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಎಂ.ಬಿ. ಪಾಟೀಲ ಬೆಂಬಲಿಗರು ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next