Advertisement

Mangaluru”ಚಡ್ಡಿಗ್ಯಾಂಗ್‌’ ಪತ್ತೆಗೆ ಮುಂದುವರಿದ ಪೊಲೀಸ್‌ ಕಾರ್ಯಾಚರಣೆ

11:35 PM Jul 08, 2024 | Team Udayavani |

ಮಂಗಳೂರು: ಕೋಡಿಕಲ್‌ನಲ್ಲಿ ಶನಿವಾರ ನಸುಕಿನ ವೇಳೆ ಮನೆಯೊಂದರಲ್ಲಿ ಕಳ್ಳತನ ನಡೆಸಿರುವ ಶಂಕಿತ “ಚಡ್ಡಿಗ್ಯಾಂಗ್‌’ನ ಪತ್ತೆಗೆ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ.

Advertisement

ಸಿಸಿ ಕೆಮರಾದಲ್ಲಿ ದಾಖಲಾಗಿರುವ ದೃಶ್ಯದನ್ವಯ ಕೋಡಿಕಲ್‌ನಲ್ಲಿ ಕಳವು ನಡೆಸಿರುವ ತಂಡದ ಡ್ರೆಸ್‌ ಕೋಡ್‌ “ಚಡ್ಡಿಗ್ಯಾಂಗ್‌’ಗೆ ಹೋಲುತ್ತದೆ. ಇದೇ ತಂಡ ಬೇರೆ ಕೆಲವೆಡೆಯೂ ಕಳ್ಳತನಕ್ಕೆ ಯತ್ನಿಸಿರುವ ಸಾಧ್ಯತೆ ಇದೆ. ಸಿಸಿ ಕೆಮರಾ ದೃಶ್ಯ ಆಧರಿಸಿ ಹಾಗೂ ಇತರ ಕೆಲವು ಮಾಹಿತಿಗಳ ಆಧಾರದಲ್ಲಿ ತನಿಖೆ ಮುಂದುವರಿಸಲಾಗಿದೆ.

ಯಾವುದೇ ರೀತಿಯ ಕಳವು, ಕಳವು ಯತ್ನ ಅಥವಾ ಶಂಕಿತರ ಬಗ್ಗೆ ಸಾರ್ವಜನಿಕರು ಪಕ್ಕದ ಠಾಣೆಗಳಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ವರದಾನವಾದ ನಿರಂತರ ಮಳೆ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಕಳ್ಳರಿಗೆ ವರದಾನವಾಗಿದೆ. ಇಂತಹ ದಿನಗಳಲ್ಲಿ ಸಾಮಾನ್ಯವಾಗಿ ರಾತ್ರಿ ಜನಸಂಚಾರ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಕಳ್ಳರು ಆತಂಕವಿಲ್ಲದೆ ಕಾರ್ಯಾಚರಣೆಗೆ ಇಳಿಯುತ್ತಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು. ಬೀಟ್‌ ವ್ಯವಸ್ಥೆ ಬಲಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next