Advertisement

ಕೊಯಮತ್ತೂರಿನಲ್ಲಿ ಮುಂದುವರಿದ ಎನ್‌ಐಎ ದಾಳಿ: ಶಂಕಿತರ ಮನೆಗಳಲ್ಲಿ ಶೋಧ

01:21 PM Jun 15, 2019 | Team Udayavani |

ಕೊಯಮತ್ತೂರು: ಕೇರಳ, ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ಐಸಿಸ್‌ ಬೆಂಬಲಿಗರ ವ್ಯೂಹವನ್ನು ಭೇದಿಸುವಲ್ಲಿ ನಿರತ ವಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ತನ್ನ ಕಾರ್ಯಾಚರಣೆಯ 2ನೇ ದಿನವಾದ ಗುರುವಾರ, ಮೂವರ ಮನೆಗಳ ಮೇಲೆ ದಾಳಿ ನಡೆಸಿದೆ.

Advertisement

ಮೊಹಮ್ಮದ್‌ ಹುಸೇನ್‌, ಶಹಜಹಾನ್‌ ಹಾಗೂ ಹಯಾತುಲ್ಲಾ ಎಂಬುವರ ಮನೆಗಳ ಮೇಲೆ ಬೆಳಗಿನ ಜಾವ 4.30ರ ಸುಮಾರಿಗೆ ಈ ದಾಳಿಗಳನ್ನು ನಡೆಸಲಾಗಿದೆ. ಆದರೆ, ದಾಳಿಯ ವಿವರಗಳನ್ನು ಪ್ರಕಟಿಸಲಾಗಿಲ್ಲ.

ಈ ನಡುವೆ, ಶ್ರೀಲಂಕಾದ ಈಸ್ಟರ್‌ ಸರಣಿ ಸ್ಫೋಟಗಳ ರೂವಾರಿ ಝಹ್ರಾ ಹಶೀಂ ಜತೆಗೆ ಸ್ನೇಹ ಹೊಂದಿದ್ದ ಕೊಯಮತ್ತೂರಿನ ಮೊಹಮ್ಮದ್‌ ಅಜರುದ್ದೀನ್‌ ಎಂಬ ಯುವಕ ನನ್ನು ಬುಧವಾರ ಬಂಧಿಸಿದ್ದ ಎನ್‌ಐಎ, ಅದೇ ದಿನ ಶೇಕ್‌ ಹಿದಾಯತುಲ್ಲಾ, ಅಕ್ರಮ್‌ ಸಿಂಧಾ, ಎಂ. ಅಬೂಬಕರ್‌, ಸದ್ದಾಂ ಹುಸೇನ್‌ ಹಾಗೂ ಇಬ್ರಾಹಿಂ ಅಲಿಯಾಸ್‌ ಶಾಹಿನ್‌ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು. ಗುರುವಾರವೂ ಇವರ ವಿಚಾರಣೆ ಮುಂದುವರಿದಿದೆ ಎಂದು ಹೇಳಲಾಗಿದೆ.

ಬಂಧಿತ ಅಜರುದ್ದೀನ್‌ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಗೆ ಸದ್ಯದಲ್ಲೇ ಕರೆದೊಯ್ಯಲಾಗುತ್ತದೆ. ವಿಚಾರಣೆ ಗೊಳ ಪಟ್ಟಿರುವ ಐವರಿಗೆ ಕೊಚ್ಚಿಯಲ್ಲಿರುವ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರಾಗು ವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next