Advertisement

ಮೇಯರ್‌-ಉಪಮೇಯರ್‌ ಚುನಾವಣೆಗೆ ತಾತ್ಕಾಲಿಕ ತಡೆ ಮುಂದುವರಿಕೆ

11:58 AM Mar 15, 2022 | Team Udayavani |

ಕಲಬುರಗಿ: ತಿಂಗಳೊಳಗೆ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌- ಉಪಮೇಯರ್‌ ಚುನಾವಣೆ ನಡೆಸಬೇಕೆಂಬ ಆದೇಶಕ್ಕೆ ಇಲ್ಲಿನ ಕರ್ನಾಟಕ ಹೈಕೋರ್ಟ್‍ನ ವಿಭಾಗೀಯ ಪೀಠವು ಕಳೆದ ಫೆ.24ರಂದು ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಮತ್ತೇರಡು ವಾರ ಕಾಲ ಮುಂದುವರೆಸಿ ಆದೇಶ ನೀಡಿದೆ.

Advertisement

ಕಳೆದ ಫೆ.4ರಂದು ಇಲ್ಲಿನ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯತ್ವ ಪೀಠ ಹಳೇ ಮೀಸಲಾತಿ ಯಂತೆ ಮೇಯರ್‌-ಉಪಮೇಯರ್‌ ಚುನಾವಣೆ ನಡೆಸಬೇಕು ಹಾಗೂ ಹೊಸದಾಗಿ ಐವರು ವಿಧಾನ ಪರಿಷತ್‌ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳದೇ ನ.6ರಂದು ಹೊರಡಿಸಲಾದ ಅಧಿಸೂಚನೆ ಪ್ರಕಾರ ಹಿಂದಿನ ಮತದಾರರ ಪಟ್ಟಿಯಂತೆ ಜತೆಗೆ ಹಿಂದಿನ ಮೀಸಲಾತಿಯಂತೆ ಚುನಾವಣೆ ನಡೆಸಬೇಕೆಂಬ ಆದೇಶಕ್ಕೆ ಕಳೆದ ಫೆ.24ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಲಾ ಮುಂದಿನ ವಿಚಾರಣೆ ಮಾ.14ಕ್ಕೆ ನಿಗದಿ ಮಾಡಲಾಗಿ ಆದೇಶ ನೀಡಲಾಗಿತ್ತು.

ಮಾ.14ರಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು ಈಗ ತಡೆಯಾಜ್ಞೆಯನ್ನು ಎರಡು ವಾರ ಕಾಲ ಮುಂದುವರೆಸಿದೆ. ಸೋಮವಾರ ದಿನ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ ಹಾಗೂ ಅನಂತ ರಮಾನಾಥ ಹೆಗಡೆ ಅವರು ಎರಡು ವಾರಗಳ ಕಾಲ ಹಿಂದಿನ ತಡೆಯಾಜ್ಞೆ ಆದೇಶ ಎರಡು ವಾರ ಕಾಲ ಮುಂದುವರೆಸಿ ಎಂದು ತೀರ್ಪು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next