Advertisement
ತಮ್ಮ ಸರಕಾರಿ ನಿವಾಸದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿರುವುದು ಸರಿಯಲ್ಲ. ಒಂದು ಜಿಲ್ಲೆಯಲ್ಲಿ ಶಾಲೆ ನಡೆಸು ವುದು, ಮತ್ತೊಂದೆಡೆ ಮುಚ್ಚಿದರೆ ಗೊಂದಲವಾಗುತ್ತದೆ. ಆದ್ದರಿಂದ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸರಕಾರ ತೀರ್ಮಾನ ತೆಗೆದು ಕೊಳ್ಳಬೇಕು ಎಂದರು.
ವಿದ್ಯಾಗಮ ಕಾರ್ಯಕ್ರಮದಿಂದ ಏನೂ ಪ್ರಯೋಜನವಿಲ್ಲ. ಗುಡಿ ಯೊಳಗೆ, ಮರದ ಕೆಳಗೆ ಕಲಿಸಬೇಕು ಎಂದರೆ ಹೇಗೆ? ಅದೇ ರೀತಿ ಆನ್‌ಲೈನ್ ತರಗತಿಗಳು ಎಲ್ಲ ಕಡೆ ಯಶಸ್ವಿ ಆಗುವುದಿಲ್ಲ. ಒಂದಿಷ್ಟು ಶ್ರೀಮಂತರ ಮತ್ತು ನಗರ ಪ್ರದೇಶದ ಮಕ್ಕಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯಬಹುದು. ಗ್ರಾಮೀಣ ಭಾಗಕ್ಕೆ ಆನ್‌ಲೈನ್ ಶಿಕ್ಷಣ ನಡೆಯುವುದಿಲ್ಲ. ಇದರಿಂದ ಬಡ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯುವ ಆತಂಕವಿದೆ ಎಂದು ಹೇಳಿದರು.
Related Articles
Advertisement
ವಿಧಾನಸೌಧದಲ್ಲಿ ಕೊಠಡಿ ಬೇಡುವ ಸ್ಥಿತಿ ಶಾಸಕಾಂಗಕ್ಕಾಗಿ ಕಟ್ಟಲಾಗಿರುವ ವಿಧಾನಸೌಧದಲ್ಲಿ ಕಾರ್ಯಾಂಗ ಠಿಕಾಣಿ ಹೂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸೌಧ ಇರುವುದೇ ಶಾಸಕಾಂಗಕ್ಕಾಗಿ. ಆದರೆ, ಅಲ್ಲಿ ಕೊಠಡಿ ಕೊಡಿ ಎಂದು ಕೇಳುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸೌಧ ಕಟ್ಟಿರುವುದೇ ಶಾಸಕಾಂಗಕ್ಕೆ. ವಿಧಾನಸೌಧದಲ್ಲಿ ಕೊಠಡಿ ಕೊಡಿ ಎಂದು ನಾವು ಆದೇಶಿಸಬೇಕು. ಆದರೆ, ಕೊಠಡಿ ಕೊಡಿ ಎಂದು ಕೇಳುವ ಪರಿಸ್ಥಿತಿ ಇದೆ. ನಾವು ಸಿಬಂದಿ ಮತ್ತು ಆಡಳಿತ ಸುಧಾರಣ(ಡಿಪಿಎಆರ್) ಇಲಾಖೆಯನ್ನು ಬೇಡುವ ಪರಿಸ್ಥಿತಿ ಇರುವುದು ಸರಿಯಲ್ಲ. ಚಿಕ್ಕ ಕೊಠಡಿಯಲ್ಲಿ 30 ಸಿಬಂದಿ ಕುಳಿತುಕೊಳ್ಳಬೇಕಾಗಿದ್ದು, ಸದ್ಯದ ಸ್ಥಿತಿಯಲ್ಲಿ ಅದು ಕಷ್ಟವಾಗುತ್ತದೆ. ಕೊಠಡಿ ಕೊಡುವಂತೆ ಡಿಪಿಎಆರ್ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಏನು ಮಾಡುತ್ತಾರೆ ನೋಡೋಣ. ಸ್ಪೀಕರ್ ಕೂಡ ಕೊಠಡಿ ಕೇಳಿದ್ದಾರೆ. ಶಾಸಕಾಂಗ ಹಾಗೂ ಕಾರ್ಯಾಂಗವನ್ನು ಪ್ರತ್ಯೇಕಿಸಬೇಕು. ವಿಧಾನಸೌಧ ಇರುವುದು ಶಾಸಕಾಂಗಕ್ಕೆ ಮಾತ್ರ. ಕಾರ್ಯಾಂಗವು ಬಹುಮಹಡಿ ಕಟ್ಟಡಕ್ಕೆ (ಎಂಎಸ್ ಬಿಲ್ಡಿಂಗ್‌ಗೆ) ಸ್ಥಳಾಂತರವಾಗಲಿ. ನಾವು ಶಿಮ್ಲಾಗೆ ಪ್ರವಾಸ ಹೋಗಿದ್ದಾಗ ಅಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಬೇರೆಯಾಗಿವೆ ಎಂದರು.