Advertisement

ರೈಲ್ವೆ ಹಳೇ ವೇಳಾಪಟ್ಟಿ ಮುಂದುವರಿಯಲಿ

03:10 PM Oct 23, 2018 | Team Udayavani |

ಹುಮನಾಬಾದ: ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಹುಮನಾಬಾದ ಬೀದರ ರೈಲು ಸೇವೆ ಆರಂಭವಾಗಿರುವುದು ಸಂತಸದ ಸಂಗತಿ. ಆದರೆ ಆರಂಭದ ವೇಳಾಪಟ್ಟಿ ಬದಲಾವಣೆ ಮಾಡಿರುವುದು ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ನಿಷ್ಪ್ರಯೋಜಕವಾಗಿದ್ದು, ಹಳೆಯ
ವೇಳಾಪಟ್ಟಿಯನ್ನೇ ಮುಂದುವರಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.

Advertisement

2015ರಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಹುಮನಾಬಾದ- ಬೀದರ್‌ ಮಧ್ಯದ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ರೈಲು ಸೇವೆ ಆರಂಭಿಗೊಂಡಿದ್ದೇ ಸಂತಸ ತಂದಿದ್ದ ಆ ವೇಳೆ ಪ್ರತಿನಿತ್ಯ ಬೆಳಗ್ಗೆ 8ರಿಂದ 3 ಸುತ್ತು ಪ್ರಯಾಣಿಸುತ್ತಿತ್ತು. ಇದರಿಂದ ಸಹಜವಾಗಿಯೇ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ವಿಶೇಷವಾಗಿ ಬೀದರ್‌ ಜಿಲ್ಲಾ ಕೆಂದ್ರದಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ನಿತ್ಯ ತೆರಳುತ್ತಿದ್ದ ಸರ್ಕಾರಿ ನೌಕರರು
ಕಚೇರಿ ಆರಂಭಗೊಳ್ಳುವ ಹೊತ್ತಿಗೆ, ವಿದ್ಯಾರ್ಥಿಗಳು ಕಾಲೇಜು ಆರಣಂಭಗೊಳ್ಳುವ ಹೊತ್ತಿಗೆ ಸಕಾಲಕ್ಕೆ ಕೇವಲ 15ರೂ.ನಲ್ಲಿ ತೆರಳುತ್ತಿದ್ದರು. ರೈಲು ಸೇವೆ ಈಗಲೂ ಇದೆ. ಆದರೆ ಬೆಳಗ್ಗೆ ಬೀದರ್‌ಗೆ ತೆರಳುವ ಸರ್ಕಾರಿ ನೌಕರರ ಸಂಖ್ಯೆ 100ಕ್ಕೂ ಅಧಿಕ. ವಿದ್ಯಾರ್ಥಿಗಳ ಸಂಖ್ಯೆ 250 ಕ್ಕೂ ಅಧಿ ಕ ಇದೆ.

ಅದನ್ನು ಹೊರತುಪಡಿಸಿ, ವ್ಯಾಪಾರಿಗಳು ಇತ್ಯಾದಿ ಸೇರಿ ನಿತ್ಯ ಸಾವಿರಾರು ಪ್ರಯಾಣಿಕರು ಈ ಸೌಲಭ್ಯದಿಂದ ಪ್ರಯೋಜನ ಪಡೆಯುತ್ತಿದ್ದರು. ಅದೇ ಸಮಯಕ್ಕೆ ಕಲಬುರಗಿಯಿಂದ ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಆರಂಭಿಸಿದರೆ 8ಕ್ಕೆ ಹುಮನಾಬಾದ ತಲುಪಿದರೆ ಅತಿ ಹೆಚ್ಚು ಅನುಕೂಲವಾಗುತ್ತದೆ. ಇದನ್ನು ಶೀಘ್ರ ಆರಂಭಿಸಬೇಕು ಎನ್ನುತ್ತಾರೆ ಸರ್ಕಾರಿ ನೌಕರ ಮನೋಹರ ಭಂಡಾರಿ, ಪ್ರಯಾಣಿಕರಾದ ಎಚ್‌.ಕಾಶಿನಾಥರೆಡ್ಡಿ, ವೀರಣ್ಣ ವಾರದ್‌, ಬಿ.ಎಸ್‌.ಖೂಬಾ, ಚೆನ್ನಪ್ಪ ನಿರ್ಣಾ, ಕಾಶಿನಾಥಸ್ವಾಮಿ ಇನ್ನು ಮೊದಲಾದವರು. 

ಇಂಟರ್‌ಸಿಟಿ ಆರಂಭಿಸಿ: ಈ ಎಲ್ಲದರ ಜೊತೆಗೆ ಹುಮನಾಬಾದನಿಂದ ಹೈದ್ರಾಬಾದಗೆ ತೆರಳಲು ಬಸ್‌ಗೆ 160 ರೂ. ಇದೆ. ಅದೇ ರೈಲಿನಲ್ಲಿ ಸಂಚರಿಸಿದರೇ ಕೇವಲ 40-50 ರೂ. ಮಾತ್ರ ತಗಲುತ್ತದೆ. ಕಾರಣ ಬೀದರ್‌ -ಹೈದ್ರಾಬಾದ್‌ ಮಧ್ಯ ಸಂಚರಿಸುವ ಇಂಟರ್‌ಸಿಟಿ ರೈಲು ಸೇವೆ
ಹುಮನಾಬಾದನಿಂದ ಆರಂಭಿಸಿದರೇ ಈ ಭಾಗದ ವ್ಯಾಪಾರಿಗಳಿಗೆ ಹೆಚ್ಚು ಸೌಲಭ್ಯ ಒದಗಿಸಿದಂತಾಗುತ್ತದೆ ಎನ್ನುತ್ತಾರೆ ಹೀರಾಲಾಲ್‌ ಶ್ರಾವಣ, ಸಂಗಮೇಶ ಜಾಜಿ, ಲಕ್ಷ್ಮೀಕಾಂತ ವಿ.ಉದಗೀರೆ, ಶರಣಪ್ಪ ಕಣಜಿ, ರಮೇಶ ಸಜ್ಜನಶಟ್ಟಿ, ಅಶೋಕ ಮೇಡಿಕಲ್‌, ಶರಣಪ್ಪ ಭಾವಿ ಇನ್ನೂ ಮೊದಲಾದವರು.

ರೈಲ್ವೆ ಇಲಾಖೆ ಪ್ರತೀ ವರ್ಷಕ್ಕೊಮ್ಮೆ ಪ್ರಯಾಣಿಕರ ಬೇಡಿಕೆ ಜೊತೆಗೆ ಆದಾಯ ಗಮನದಲ್ಲಿಟ್ಟು ಕೊಂಡು ರೈಲು ಸಂಚಾರ ಸಮಯ ಬದಲಾವಣೆ ಮಾಡುತ್ತದೆ. ಬೆಳಗ್ಗೆ ರೈಲು ಸೇವೆ ರದ್ದಾದ ನಂತರ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ವರ್ಷಾಂತ್ಯ ಅಥವಾ 2019ನೇ ಸಾಲಿನಲ್ಲಿ ಆ ಸೇವೆ ಪುನರ್‌ ಆರಂಭಗೊಳ್ಳುತ್ತದೆ. ಈ ಎಲ್ಲದರ ಜೊತೆಗೆ ಇಂಟರ್‌ಸಿಟಿ ರೈಲು ಸೇವೆ ಕುರಿತು ಚರ್ಚಿಸಿದ್ದೇನೆ. ಈ ಎಲ್ಲದರ ಜೊತೆಗೆ ಹುಮನಾಬಾದ ಮಾರ್ಗವಾಗಿ ಸಂಚರಿಸಲಿರುವ ಸಿಕಿಂದ್ರಬಾದ್‌- ಹುಬ್ಬಳ್ಳಿ ರೈಲು ಸೇವೆ ಸಹ ಸಾಧ್ಯವಾದಷ್ಟು ಶೀಘ್ರ ಆರಂಭಗೊಳ್ಳಲಿದೆ. ಇಲ್ಲಿಂದಲೇ ನೇರ ಬೆಂಗಳೂರು ಮೊದಲಾದ ದೂರದ ಪ್ರಯಾಣ ಸೌಲಭ್ಯ ದಕ್ಕಲಿದೆ.
ಭಗವಂತ ಖೂಬಾ, ಸಂಸದರು

Advertisement

ನಾನೊಬ್ಬ ವ್ಯಾಪಾರಿ. ಹುಮನಾಬಾದ-ಬೀದರ್‌ ಮಧ್ಯ ಬೆಳಗ್ಗೆ 8ಕ್ಕೆ ರೈಲು ಸೇವೆ ಆರಂಭಸಿದ್ದು ಗಮನಿಸಿ, ಕೇವಲ 15ರೂ.ನಲ್ಲಿ ಬೀದರ್‌ಗೆ ತೆರಳಬಹುದೆಂದು ಭಾವಿಸಿ ನನ್ನ ಮಗನನ್ನು ವ್ಯಾಸಂಗಕ್ಕಾಗಿ ಬೀದರ್‌ಗೆ ಕಳಿಸುತ್ತಿದ್ದೆ. ಈಗ ಆ ರೈಲು ಸೇವೆ ರದ್ದು ಆದಾಗಿನಿಂದ ಬಸ್‌ನಲ್ಲಿ ಸಂಚರಿಸುತ್ತಿದ್ದಾನೆ. ಭಾರ ಸಹಿಸುವುದು ಕಷ್ಟಸಾಧ್ಯವಾಗಿದೆ. ಜೊತೆಗೆ ನಾನು ಒಳಗೊಂಡಂತೆ ಇಲ್ಲಿನ ನೂರಾರು ವ್ಯಾಪಾರಿಗಳು ಸಾಮಗ್ರಿ ಖರೀದಿಗಾಗಿ ಗೈದ್ರಾಬಾದ್‌ಗೆ ಹೋಗುತ್ತೇವೆ. ಇಂಟರಸಿಟಿ ರೈಲು ಸೇವೆ ಇಲ್ಲಿಂದಲೇ ಆರಂಭಿಸಿದರೆ ಈ ಭಾಗದ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಆಗುತ್ತದೆ. ಸಂಬಂಧಪಟ್ಟವರ ಈ ಕುರಿತು ಗಂಭೀರವಾಗಿ ಚಿಂತಿಸಬೇಕು.
 ಹೀರಾಲಾಲ್‌ ಶ್ರಾವಣ, ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next