Advertisement

ವಿದ್ಯುತ್ ಸ್ಥಾವರಗಳ ಬಿಲ್ಲಿಂಗ್ ರಿಯಾಯ್ತಿ ಮುಂದುವರಿಕೆ; ಗೊಂದಲ ಬೇಡ: ಸವದಿ ಸ್ಪಷ್ಟನೆ

07:19 PM Jun 03, 2022 | Team Udayavani |

ರಬಕವಿ-ಬನಹಟ್ಟಿ: 10 ಹೆಚ್.ಪಿವರೆಗಿನ ರೈತರ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸ್ಥಾವರಗಳು, ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಸ್ಥಾವರಗಳು ಮತ್ತು ನೇಕಾರ ವಿಶೇಷ ಪ್ಯಾಕೇಜ್ ಯೋಜನೆಯಡಿಯಲ್ಲಿ ಬರುವ ವಿದ್ಯುತ್ ಕೈಮಗ್ಗ ಸ್ಥಾವರಗಳಿಗೆ ಇದ್ದ ರಿಯಾಯ್ತಿ ಬಿಲ್ಲಿಂಗ್ ಮುಂದುವರೆಯಲಿದ್ದು, ನೇಕಾರರಲ್ಲಿ ಯಾವದೇ ಗೊಂದಲಬೇಡವೆಂದು ಕೆಎಚ್‌ಡಿಸಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದರು.

Advertisement

ಬನಹಟ್ಟಿಯ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಮೇ 1 ರಿಂದ ಜಾರಿಗೆ ಬರುವಂತೆ ಭಾಗ್ಯ ಜ್ಯೋತಿ ಹಾಗು ಕುಟೀರ ಜ್ಯೋತಿ ಸ್ಥಾವರಗಳು ಹಾಗು ನೇಕಾರ ವಿಶೇಷ ಪ್ಯಾಕೇಜ್‌ನ್ನು ಮುಂದುವರೆಸಿದೆ. 2008 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ನೇಕಾರರಿಗೆಂದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಮೊದಲಿನಂತೇ ಬಿಲ್ಲಿಂಗ್ ಮಾಡಲು ಆದೇಶ ಮಾಡಿದ್ದು ಸಮಸ್ಯೆ ನಿವಾರಣೆಯಾಗುವಂತಾಗಿದೆ ಎಂದು ಸವದಿ ತಿಳಿಸಿದರು.

ನೇಕಾರರ ಸಮ್ಮಾನ ಯೋಜನೆಯು ಕಟ್ಟಕಡೆಯ ನೇಕಾರನಿಗೂ ದೊರಕುವಲ್ಲಿ ಸರ್ಕಾರ ಮಹತ್ತರ ಯೋಜನೆ ನಿರ್ಮಿಸಿದೆ. ಈ ಯೋಜನೆಯಲ್ಲಿ ಯಾವ ನೇಕಾರನೂ ಉಳಿಯಬಾರದು. ಆ ಉದ್ಧೇಶದಿಂದ ಕೂಲಿ ನೇಕಾರನಿಗೂ ಕನಿಷ್ಠ 5 ಸಾವಿರ ರೂ. ವಾರ್ಷಿಕವಾಗಿ ದೊರಕುವಲ್ಲಿ ಪ್ರಾಮಾಣಿಕ ಹೋರಾಟ ನನ್ನದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಸಮಾಲೋಚನೆ ನಡೆಸಿದ್ದು, ಬಜೆಟ್‌ನಲ್ಲಿಯೂ ಆದೇಶ ಹೊರಡಿಸಿ ಈಗಿರುವ ೩ ಸಾವಿರ ರೂ.ಗಳ ಬದಲಾಗಿ ೫ ಸಾವಿರ ರೂ. ವಾರ್ಷಿಕವಾಗಿ ಪ್ರತಿ ನೇಕಾರನಿಗೂ ದೊರಕಲಿದೆ ಎಂದರು.

ಇದೇ ಸಂದರ್ಭ ರಾಜು ಅಂಬಲಿ, ಮಲ್ಲಿಕಾರ್ಜುನ ಬಾಣಕಾರ, ಆನಂದ ಜಗದಾಳ, ಭದ್ರನ್ನವರ, ಪವಾರ, ಉದಗಟ್ಟಿ ಸೇರಿದಂತೆ ಅನೇಕರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next