Advertisement

ಪಡುಬಿದ್ರಿ : ಅಲಯನ್ಸ್‌ ಟಗ್‌ ತೆರವು ಕಾರ್ಯ ಮುಂದುವರಿಕೆ

02:40 AM May 22, 2021 | Team Udayavani |

ಪಡುಬಿದ್ರಿ : ತೌಖ್ತೇ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯಲ್ಲಿ ದಡ ಸೇರಿರುವ ಅಲಯನ್ಸ್‌ ಟಗ್‌ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿದೆ.

Advertisement

ಟಗ್‌ ಮೇಲೆತ್ತಲು ದಿನಪೂರ್ತಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇನ್ನಷ್ಟು ಪರಿಕರಗಳನ್ನು ತಂದು ಶನಿವಾರ ಮುಂಜಾನೆ ಕಾರ್ಯಾಚರಣೆ ಮುಂದುವರಿಯಯಲಿದೆ. ಮಂಗಳೂರು ಬೇಂಗರೆಯ ಬದ್ರಿಯಾ ಕಂಪೆನಿಯ ಬಿಲಾಲ್‌ ಮೊಯ್ದಿನ್‌ ನೇತೃತ್ವದ ತಂಡ ಶುಕ್ರವಾರ ಸಾಹಸದಿಂದ ಕಾರ್ಯಾಚರಣೆ ನಡೆಸಿದರೂ ಟಗ್‌ ಮೇಲೆತ್ತಲು ಸಾಧ್ಯವಾಗಿಲ್ಲ.

ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲ
ಈ ಟಗ್‌ನಲ್ಲಿದ್ದ ಮೂವರು ನಾಪತ್ತೆಯಾಗಿದ್ದು ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ. ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದರಿಂದ ಈ ಟಗ್‌ ಒಳಗಡೆಯೇ ಅವರು ಇರಬಹುದಾಗಿ ಶಂಕಿಸಲಾಗಿದೆ. ಈ ನಡುವೆ ಮತ್ತೂಂದು ಟಗ್‌ನಲ್ಲಿದ್ದ ಚೀಫ್‌ ಎಂಜಿನಿಯರ್‌ ರತ್ನಗಿರಿಯ ಅಶ್ಫಾಕ್‌ ಆಲಿ ಖಲ್ಪೆ ಕೊನೇ ಕ್ಷಣದಲ್ಲಿ ಎನ್‌ಎಂಪಿಟಿಗೆ ತೆರಳಲು ಈ ಟಗ್‌ ಹತ್ತಿದ್ದು, ಅವರು ಇನ್ನೂ ನಾಪತ್ತೆಯಾಗಿದ್ದಾರೆ. ಅವರ ಮಗ ಸಹಿತ ಕುಟುಂಬ ಸದಸ್ಯರು ಘಟನೆ ನಡೆದ ಮರುದಿನದಿಂದ ಪಡುಬಿದ್ರಿಯಲ್ಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next