Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ. ಯತ್ನಾಳ್ ಸಹಿತ ಬಿಜೆಪಿ ಮುಖಂಡರಿಂದ ಜಾತಿ, ಧರ್ಮ ಸಹಿಷ್ಣುತೆ ನಿರೀಕ್ಷಿಸುವುದು ಅಸಾಧ್ಯ. ಸಿಎಂ ಸಿದ್ದರಾಮಯ್ಯ ಮುಸ್ಲಿಂ ಧರ್ಮ ಗುರುಗಳ ಕಾರ್ಯಕ್ರಮದಲ್ಲಿ ಮೌಲ್ವಿಗಳ ಪಕ್ಕದಲ್ಲಿ ಕುಳಿತುಕೊಂಡಿದ್ದನ್ನು ಉಗ್ರವಾದಿಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಕನ್ನಡ ನಾಡು ಶಾಂತಿ ಸೌಹಾರ್ದ ಹಾಗೂ ಜಾತ್ಯತೀತತೆಗೆ ಹೆಸರಾಗಿದೆ. ಸರ್ವರೂ ಅದನ್ನು ಉಳಿಸಿಕೊಂಡು ಹೋಗಲು ಯತ್ನಿಸಬೇಕು. ಸಿಎಂ ಸಿದ್ದರಾಮಯ್ಯ ಸರ್ವ ಜನರ ಏಳ್ಗೆಗಾಗಿ ಇರುವ ಶಕ್ತಿ. ಅವರನ್ನು ಪದೇಪದೆ ಮುಸ್ಲಿಂ ತುಷ್ಟೀಕರಣದ ದೃಷ್ಟಿಯಲ್ಲಿ ಬಿಜೆಪಿ, ಸಂಘ ಪರಿವಾರದ ಮುಖಂಡರು ನೋಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಸಿಂಧನೂರು: ನಾನು ಯಾವುದೇ ವರ್ಗಾವಣೆ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ವಿರುದ್ಧ ಸಾಕ್ಷಿ ಇದ್ದರೆ ವಿಪಕ್ಷಗಳು ತೋರಿಸಲಿ. ಆಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಮಾಜಿ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರಕಾರ ಇದ್ದಾಗ ಬಿ.ವೈ.ವಿಜಯೇಂದ್ರ ಅವರ ವಿಎಸ್‌ಟಿ ಆರೋಪ ಇತ್ತು. ಆದರೆ ನಮ್ಮ ಸರಕಾರದಲ್ಲಿ ಅಂತಹ ಯಾವುದೇ ಆರೋಪಗಳಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಬೇಡಿಕೆಗಳನ್ನು ಈಡೇರಿಸಿದ್ದು, ಜನಪರ ಆಡಳಿತ ನೀಡುತ್ತಿದೆ ಎಂದು ಹೇಳಿದರು.