Advertisement

ನ್ಯಾಯಾಂಗ ನಿಂದನೆ ಅರ್ಜಿ

11:28 AM Mar 25, 2017 | |

ಬೆಂಗಳೂರು: ಅಲಯನ್ಸ್‌ ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಬಾರದೆಂಬ ಸಿವಿಲ್‌ ನ್ಯಾಯಾಲಯದ ಆದೇಶ ಉಲ್ಲಂ ಸಿದ್ದ ವಿವಿಯ ಪದಚ್ಯುತ ಕುಲಾಧಿಪತಿ ಮಧುಕರ್‌ ಜಿ. ಅಂಗೂರ್‌ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್‌ ಇತ್ಯರ್ಥಪಡಿಸಿದೆ.

Advertisement

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ. ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ, ಸಿವಿಲ್‌ ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತ ವಿವಾದವನ್ನು ಅದೇ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿ­ಕೊಳ್ಳಬೇಕು ಎಂದು ಅರ್ಜಿದಾರರಾದ ವಿವಿ ಕುಲಸಚಿವ ಮಧುಸೂದನ್‌ಮಿಶ್ರಾ ಮತ್ತು ಶ್ರೇಯಸ್‌ ಸಂಜೀವ್‌ ಅವರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥ ಗೊಳಿಸಿತು.

ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ಅಲಯನ್ಸ್‌ ವಿವಿಯ ಕುಲಾಧಿಪತಿಯಾಗಿದ್ದ ಮಧುಕರ್‌ ಜಿ. ಅಂಗೂರ್‌ ಪದಚ್ಯುತಗೊಳಿಸಿದ್ದ, ಆಡಳಿತ ಮಂಡಳಿ ಸಿವಿಲ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪದಚ್ಯುತ­ಗೊಂಡಿರುವ ನೀವು ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಬಾರದೆಂದು ಸೂಚಿಸಿತ್ತು.

ಇದಾದ ಬಳಿಕವೂ ಮಧುಕರ್‌ ಅಂಗೂರ್‌ ಆಡಳಿತ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ದೂರಿ ವಿವಿ ಕುಲಸಚಿವ ಮಧುಸೂದನ್‌ಮಿಶ್ರಾ ಮತ್ತು ಶ್ರೇಯಸ್‌ ಸಂಜೀವ್‌, ಮಧುಕರ್‌ ವಿರುದ್ಧ ಹೈಕೋರ್ಟ್‌ನಲ್ಲಿ  ನ್ಯಾಯಾಂಗ ಆದೇಶ ಉಲ್ಲಂಘನೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next