Advertisement

Chennai: ರಸ್ತೆಯಲ್ಲಿ ಕೆಟ್ಟುನಿಂತ 535 ಕೋಟಿ ರೂ. ನಗದು ಸಾಗಿಸುತ್ತಿದ್ದ ಆರ್‌ಬಿಐಯ ಟ್ರಕ್

12:16 PM May 18, 2023 | Team Udayavani |

ಚೆನ್ನೈ: ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯಿಂದ 1,070 ಕೋಟಿ ರೂ. ನಗದನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್ ಗಳನ್ನು ಕೆಲಕಾಲ ಚೆನ್ನೈನ ತಾಂಬರಂ ರಸ್ತೆಯಲ್ಲಿ ನಿಲ್ಲಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

Advertisement

ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯಿಂದ ಜಿಲ್ಲೆಯ ಬ್ಯಾಂಕ್‌ಗಳಿಗೆ ಕರೆನ್ಸಿ ತಲುಪಿಸಲು ವಿಲ್ಲುಪುರಂಗೆ ಬರುತ್ತಿತ್ತು. ಈ ವೇಳೆ 535 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಒಂದು ಕಂಟೈನರ್ ಟ್ರಕ್ ಚೆನ್ನೈನಲ್ಲಿ ಕೆಟ್ಟು ನಿಂತಿದೆ. ಒಂದು ಟ್ರಕ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಲಾರಿಗಳನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆ ಮಾನ್ಯ ಎತ್ತಿಹಿಡಿದ ಸುಪ್ರೀಂ: ಕಂಬಳಕ್ಕೂ ಸಿಕ್ತು ಬಿಗ್ ರಿಲೀಫ್

ಈ ವಿಚಾರ ತಿಳಿದು ಕ್ರೋಂಪೇಟೆ ಸ್ಥಳಕ್ಕೆ ಆಗಮಿಸಿ, 100 ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಟ್ರಕ್‌ ಗಳಿಗೆ ರಕ್ಷಣೆ ನೀಡಿದೆ.

ಒಂದು ಟ್ರಕ್ ಕೆಟ್ಟುಹೋದ ನಂತರ, ಭದ್ರತಾ ಕಾರಣಗಳಿಗಾಗಿ ಅದನ್ನು ಚೆನ್ನೈನ ತಾಂಬರಂನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಿದ್ಧಕ್ಕೆ ಸ್ಥಳಾಂತರಿಸಲಾಗಿತ್ತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಿದ್ಧಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆ ಬಳಿಕ ಮೆಕ್ಯಾನಿಕ್ ಗಳು ಬಂದು ದೋಷವನ್ನು ಸರಿಪಡಿಸಿದ ಬಳಿಕ ಟ್ರಕ್‌ ಗಳನ್ನು ಸಾಗಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next