Advertisement
ನವಮಂಗಳೂರು ಬಂದರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಿಎಂಐಸಿಡಿಸಿಯ ಸಿಇಒ ಅಲ್ಕೇಶ್ ಕೆ. ಶರ್ಮ ನೂತನ ಲಾಜಿಸ್ಟಿಕ್ ಯೋಜನೆ ಉದ್ಘಾಟಿಸಿದರು. ಇದು ಕಂಟೈನರ್‌ಗಳು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ಮುಟ್ಟಲು ಸಹಕಾರಿಯಾಗಲಿದೆ. ವೆಬ್‌ಸೈಟ್ ಮೂಲಕ ಪ್ರತಿಕ್ಷಣದ ಚಲನವಲನವನ್ನು ಪರಿಶೀಲಿಸಲಾಗುತ್ತದೆ.
ಸಿವಿಒ ಶ್ರೀಕೃಷ್ಣ ಕರತ್ತೂರಿ ಅವರು ಲಾಜಿಸ್ಟಿಕ್ ಡೇಟಾ ಸರ್ವೀಸ್ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ಎನ್‌ಎಂಪಿಟಿ ಟ್ರಾಫಿಕ್ ಮ್ಯಾನೇಜರ್ ವೈ.ಆರ್. ಬೆಳಗಲ್, ಡಿಎಲ್‌ಡಿಎಸ್‌ನ ಸಿಒಒ ಸುರ್ಜಿತ್ ಸರ್ಕಾರ್ ಉಪಸ್ಥಿತರಿದ್ದರು. ಲಾಜಿಸ್ಟಿಕ್ ಡೇಟಾ ಬ್ಯಾಂಕ್
ಲಾಜಿಸ್ಟಿಕ್ ಡೇಟಾ ಬ್ಯಾಂಕ್ (ಎಲ್‌ಡಿಬಿ) ದೇಶದ ಶೇ. 70ರಷ್ಟು ಕಂಟೈನರ್‌ಗಳ ಡೇಟಾ ನಿರ್ವಹಣೆ ಮಾಡುತ್ತಿದೆ. ಸುಮಾರು 1 ಕೋಟಿ ಕಂಟೈನರ್ ಡೇಟಾ ನಿರ್ವಹಣೆಯನ್ನು ಎಲ್‌ಡಿಬಿ ವ್ಯವಸ್ಥೆ ಮಾಡುತ್ತಿದೆ. ನೂತನ ವ್ಯವಸ್ಥೆಯಿಂದ ಕಂಟೈನರ್‌ಗಳ ಸುರಕ್ಷತೆ ಹೆಚ್ಚಲಿದೆ ಮಾತ್ರವಲ್ಲದೆ ಕ್ಲಪ್ತ ಸಮಯಕ್ಕೆ ಮುಟ್ಟುವಂತೆ ನಿಗಾ ವಹಿಸಬಹುದಾಗಿದೆ. ಪ್ರತೀ ಕಂಟೈನರ್‌ಗೂ ಡಿಜಿಟಲ್ ಟ್ರಾಕಿಂಗ್ ಯಂತ್ರ ಅಳವಡಿಕೆಗೆ ಕೇವಲ 147 ರೂ. ವೆಚ್ಚ ತಗಲುತ್ತದೆ. ಈಗ ದೇಶದ ಮಾತ್ರವಲ್ಲದೆ ವಿದೇಶದಿಂದ ಬರುವ ಕಂಟೈನರ್‌ಗಳಿಗೂ ಇದನ್ನು ಅಳವಡಿಸಿ ಆಮದು ವಸ್ತುಗಳ ಸುರಕ್ಷತೆ ಕಾಪಾಡಬಹುದಾಗಿದೆ, ದುರ್ಬಳಕೆಯನ್ನು ತಡೆಯಬಹುದು.