Advertisement

Siddapura ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ವ್ಯಕ್ತಿ ವಶಕ್ಕೆ

11:06 PM Oct 04, 2023 | Team Udayavani |

ಸಿದ್ದಾಪುರ: ಸಿದ್ದಾಪುರ ಸಂತೆ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುತ್ತಿದ್ದ ಪ್ರಕಾಶ (35) ಅವರನ್ನು ಶಂಕರನಾರಾಯಣ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಸೀರ್‌ ಹುಸೇನ್‌ ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ. ಆರೋಪಿಯ ಬಳಿ ಇದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

Advertisement

ಇನ್ನೊಂದು ಪ್ರಕರಣದಲ್ಲಿ ಅಂಪಾರು ಗ್ರಾಮದ ಮೂಡುಬಗೆ ಸಾರ್ವಜನಿಕ ಬಸ್‌ ನಿಲ್ದಾಣದ ಒಳಗೆ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುತ್ತಿದ್ದ ಶೇಖರ ಶೆಟ್ಟಿ (70) ಅವರನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next