ಕಾರ್ಕಳ: ಪ್ರಸ್ತುತ ಕಾಲಘಟ್ಟದಲ್ಲಿ ವ್ಯಾವಹಾರಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳು ಕಂಡುಬರುತ್ತಿವೆ. ಗ್ರಾಹಕರನ್ನು ಸಂತೃಪ್ತಿಗೊಳಿಸಿ ನಿರಂತರವಾಗಿ ಆತನಿಗೆ ಗರಿಷ್ಠ ಸೇವೆಯೊದಗಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಅವರು ನಿಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ಆಯೋಜಿಸಿದ ನಿಟ್ಟೆ ಸಿಇಒ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅನಿಶ್ಚಿತತೆಯೊಂದಿಗೆ ಉದ್ಯಮ ನಡೆಸುವ ಅನಿವಾರ್ಯ ಇಂದಿನ ದಿನಗಳಲ್ಲಿದೆ. ಹೀಗಾಗಿ ಬಹಳ ಎಚ್ಚರಿಕೆ, ಜಾಣ್ಮೆಯಿಂದ ವ್ಯವಹಾರ ನಡೆಸಬೇಕಾಗಿದೆ ಎಂದು ಬೆಂಗಳೂರಿನ ಜ್ಯೋತಿ ಲ್ಯಾಬೊರೇಟರೀಸ್‌ನ ಜಂಟಿ ಆಡಳಿತ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಫಿಜ ಸಮೂಹ ಉದ್ದಿಮೆಗಳ ಆಡಳಿತ ನಿರ್ದೇಶಕ, ಸಿಇಒ ಬಿ. ಎಂ. ಫಾರೂಕ್, ಪ್ರೊಫೆಸರ್ ಡಾ| ಎನ್.ಎಸ್. ಶೆಟ್ಟಿ, ಸಂಸ್ಥೆಯ ನಿರ್ದೇಶಕ ಡಾ| ಕೆ. ಶಂಕರನ್ ಮಾತನಾಡಿದರು. ಸಂಕಿರಣದ ಕನ್ವೀನರ್ ಡಾ| ಎ.ಪಿ. ಆಚಾರ್ ಪ್ರಾಸ್ತಾ¤ವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಭಾಗ್ಯಶ್ರೀ, ದೀಕ್ಷಾ ನಾಯಕ್ ಪ್ರಾರ್ಥಿಸಿದರು. ಪ್ರೊಫೆಸರ್ ಡಾ| ಸುಧೀರ್‌ರಾಜ್ ಕೆ. ನಿರೂಪಿಸಿ, ಕಾರ್ಪೊರೇಟ್ ರಿಲೇಶನ್ಸ್ ಮ್ಯಾನೇಜರ್ ಗುರುಪ್ರಶಾಂತ ಭಟ್ ವಂದಿಸಿದರು.