Advertisement

Childbirth: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಕಟ್ಟಡ ಕಾರ್ಮಿಕ ಮಹಿಳೆ !

10:00 AM Feb 09, 2024 | Team Udayavani |

ವಾಡಿ: ಸೈಜುಗಲ್ಲು ಹೊತ್ತು ಮಹಡಿಗಳನ್ನು ಹತ್ತುವ ಮೂಲಕ ಬೆಂಗಳೂರಿನಲ್ಲಿ ಮಹಲುಗಳ ನಿರ್ಮಾಣ ಕಾರ್ಯದಲ್ಲಿ ಬೆವರು ಸುರಿಸುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆಯೊಬ್ಬರು ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.

Advertisement

ಕೊಲ್ಲೂರು ಗ್ರಾಮ ನಿವಾಸಿ, 22 ವಯಸ್ಸಿನ ನಿಂಗಮ್ಮ ಈಶಪ್ಪ ಲಾಡ್ಲಾಪುರ, ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಗುರುವಾರ ಸಂಜೆ ಮೊದಲ ಹೆರಿಗೆಯ ಬೇನೆ ಕಾಣಿಸಿಕೊಂಡ ಪ್ರಯುಕ್ತ ಗ್ರಾಮದ ಆಶಾ ಕಾರ್ಯಕರ್ತೆ ನಾಗಮ್ಮ ಕುಲ್ಕುಂದಿ, ಎಂಟು ತಿಂಗಳ ಗರ್ಭಿಣಿ ಮಹಿಳೆ ನಿಂಗಮ್ಮಳನ್ನು ಕೊಲ್ಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದಾರೆ.

ಮಹಿಳೆ ಮೂರು ಗಂಡು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಒಂದು ಮಗು 2ಕೆಜಿ, ಇನ್ನೊಂದು ಮಗು 2ಕೆಜಿ 400ಗ್ರಾಂ. ಮೂರನೇ ಮಗು ಒಂದು ಕೆಜಿ ತೂಕಕ್ಕೆ ಕಡಿಮೆಯಿದೆ. ಹೆರಿಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿಯೇ ತಾಯಿ ಮಕ್ಕಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇನೆ. ಬಾಣಂತಿ ಮತ್ತು ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಮಾತ್ರ ವಿಶೇಷ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಆಶಾ ಕಾರ್ಯಕರ್ತೆ ನಾಗಮ್ಮ ಉದಯವಾಣಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Facebook live ವೇಳೆ ಜೊತೆಯಲ್ಲಿ ಇದ್ದಾತನಿಂದಲೇ ಗುಂಡಿನ ದಾಳಿ… ಶಿವಸೇನೆ ಮುಖಂಡನ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next