Advertisement

Tragic: ಕುಡಿದ ಮತ್ತಿನಲ್ಲಿ 3ನೇ ಮಹಡಿಯಿಂದ ಬಿದ್ದು ಕಟ್ಟಡ ಕಾರ್ಮಿಕ ಸಾವು

11:13 AM Jan 09, 2024 | Team Udayavani |

ಬೆಂಗಳೂರು: ಸ್ನೇಹಿತರ ಜತೆ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಉತ್ತರ ಪ್ರದೇಶ ಮೂಲದ ಅಮಿತ್‌ ಚಾಂಗ್‌(33) ಮೃತ ಕಾರ್ಮಿಕ. ನಾಲ್ಕು ತಿಂಗಳಿಂದ ವಿನಾಯಕ ಲೇಔಟ್‌ನಲ್ಲಿ ರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ರಾತ್ರಿ ಇತರೆ ಕಾರ್ಮಿಕರ ಜತೆ ಪಾರ್ಟಿ ಮಾಡಿ, ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಬಳಿಕ ಊಟ ಮುಗಿಸಿ ಅಲ್ಲಿಯೇ ಮಲಗಿದ್ದರು. ಈ ಮಧ್ಯೆ ತಡರಾತ್ರಿ ಎಚ್ಚರಗೊಂಡ ಅಮಿತ್‌ ಚಾಂಗ್‌, ಕಟ್ಟಡದಿಂದ ಇಳಿಯುವಾಗ ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಬಿದ್ದ ರಭಸಕ್ಕೆ ಅಮಿತ್‌ ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ. ಮುಂಜಾನೆ ರಕ್ತದ ಮಡುವಿನಲ್ಲಿ ಬಿದ್ದಿ ದ್ದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಕಾನೂನು ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next